ಗೆಲುವಿನ ನಗೆ ಬೀರಿದ ದಾವಣಗೆರೆ ಕುಸ್ತಿ ಪಟು ಸ್ವಾತಿ

ಹರಿಹರ, ಡಿ.7- ನಗರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಎರಡು ದಿನಗಳ ಕುಸ್ತಿ ಪಂದ್ಯಾವಳಿಯಲ್ಲಿ ಇಂದಿನ ಹೊನಲು ಬೆಳಕಿನ ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ದಾವಣಗೆರೆಯ ಕುಸ್ತಿ ಪಟು ಸ್ವಾತಿ, ಗದಗ್‌ನ ತಳವಾರ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದರು.

ನಾಡಬಂದ್ ಷಾವಲಿ ಗರಡಿ ಕುಸ್ತಿ ಜೀರ್ಣೋದ್ಧಾರ ಸಮಿತಿ (ಹರಿಹರ) ಹಾಗೂ ಕರ್ನಾಟಕ ರಾಜ್ಯ ಕುಸ್ತಿ ಸಂಘ (ಬೆಂಗಳೂರು) ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹರಿಹರ ಕಿಶೋರ, ಹರಿಹರ ಕೇಸರಿ, ಹರಿಹರ ಕುಮಾರ, ಹರಿಹರ ಕಂಠೀರವ ಬಿರುದುಗಳು ಮತ್ತು ಬೆಳ್ಳಿ ಟ್ರೋಫಿ ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ಕುಸ್ತಿ ಸಮಿತಿ ಅಧ್ಯಕ್ಷ ಎಂ.ಆರ್.ಚಂದ್ರಶೇಖರ್, ಜಗದೀಶ್ ಚೂರಿ, ಸುರೇಶ್ ಪೈಲ್ವಾನ್, ರೇವಣಪ್ಪ ಪೈಲ್ವಾನ್, ದಾವಣಗೆರೆ ತರಬೇತುದಾರ ವಿನಯ್ ಕುಮಾರ್ ಇನ್ನಿತರರಿದ್ದರು.

error: Content is protected !!