ದಾವಣಗೆರೆ, ಡಿ.5- ಶ್ರೀ ಸಿದ್ಧಗಂಗಾ ಮಕ್ಕಳ ಲೋಕದಲ್ಲಿ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳ ಕವಿಗೋಷ್ಠಿ ಆಚರಿಸಲಾಯಿತು.
ಮೂರು ದಿನಗಳ ಕಾಲ ಮಕ್ಕಳ ಹಬ್ಬ ನಡೆಯಿತು. ನಿತ್ಯಶ್ರೀ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸೇಂಟ್‌ಜಾನ್ಸ್ ಶಾಲೆಯ ಅಕ್ಷತಾ ಬಿಎಂಪಿಗೆ 125 ಅಂಕ ಲಭಿಸಿತು. ಸಂಗೀತ ಗುರುಗಳಾದ ರುಕ್ಮಾಬಾಯಿ ಅವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಕ್ಕಳಲೋಕ ಸ್ಥಾಪಕ ಕೆ.ಎನ್. ಸ್ವಾಮಿ ಗೌರವಿಸಿದರು.
ಡಾ. ಚರಿತಾ 75 ಬಡಮಕ್ಕಳನ್ನು ಪರೀಕ್ಷಿಸಿ, ಸಲಹೆ ನೀಡಿದರು. ಮಕ್ಕಳಿಗೆ ರಂಗೋಲಿ ಸ್ಪರ್ಧೆ ನಡೆಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಿ.ಕೆ. ರುದ್ರಾಕ್ಷಿಬಾಯಿ ಮಾರ್ಗದರ್ಶನ ಮಾಡಿದರು.
ಕಥಾ ಸ್ಪರ್ಧೆಯಲ್ಲಿ ಕೆ.ಟಿ. ಅನುಶ್ರೀ ಪ್ರಥಮ ಬಹುಮಾನ, ನಿತ್ಯಶ್ರೀ ಕೊಂತೆಕಲ್ ಪ್ರಥಮ, ಕನ್ನಡ ಬರವಣಿಗೆ ಸ್ಪರ್ಧೆಯಲ್ಲಿ ಯು. ಸಿಂಚನ ಪ್ರಥಮ, ರಂಗೋಲಿ ಸ್ಪರ್ಧೆಯಲ್ಲಿ ಪೂರ್ಣಿಮಾ ಪ್ರಥಮ, ಅರ್ಪಿತಾ ಬಸವರಾಜ್ ದ್ವಿತೀಯ
ಸ್ಥಾನ ಗಳಿಸಿದರು. ಸಿದ್ಧರಾಮಯ್ಯ, ಕೃಷ್ಣ ಜಾಧವ್, ಡಾ. ಚರಿತಾ ಬಹುಮಾನ ಪ್ರಾಯೋಜಕತ್ವ ವಹಿಸಿದ್ದರು. ಚಿನ್ನಸಮುದ್ರದಲ್ಲಿ ಕನ್ನಡ ಬರವಣಿಗೆ ಸ್ಪರ್ಧೆಯಲ್ಲಿ 26 ಮಕ್ಕಳು ಭಾಗವಹಿಸಿ, ಹೆಬ್ಬಾಳು ಗುರುಗಳಿಂದ, ಸೇವಾಲಾಲ್ ಗುರುಗಳಿಂದ ಬಹುಮಾನ ಪಡೆದರು.
ಸಿ.ಕೆ. ರುದ್ರಾಕ್ಷಿ ಬಾಯಿ ಅವರ ಅಭಿನಂದನಾ ಕಾರ್ಯಕ್ರಮವನ್ನು ಎನ್. ಪುಟ್ಟಾನಾಯಕ್ ಸಂಯೋಜಿಸಿದ್ದರು.