ರಾಣೇಬೆನ್ನೂರು, ಡಿ.5- ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯಲ್ಲಿ ವಿಶ್ವ ವಿಕಲಚೇತನರ ದಿನಾ ಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾಗಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಬಿ.ಜಿ. ಪ್ರಮೋದ ಆಗಮಿಸಿದ್ದರು. ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯ ನಿರ್ದೇಶಕ ಡಾ. ಗಿರೀಶ್ ಕೆಂಚಪ್ಪನವರ ಅಧ್ಯಕ್ಷತೆ ವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಗೌಡಪ್ಪಗೌಡ್ರ, ವಿಠಲ ವೈ. ಪುಠಾಣಿಕ, ಸಹಾಯಕ ಲೆಕ್ಕಾಧಿಕಾರಿಗಳು (ಹೆಸ್ಕಾಂ) ರಾಜ್ ಚಂದ್ರಪ್ಪ, ವೆಂಕೀಸ್ ಚಿಕನ್ ಫ್ಯಾಕ್ಟರಿ ಲೆಕ್ಕಪತ್ರ ವಿಭಾಗದ ಅರುಣ್ ಕೋಳೂರು, ಮೆಕ್ಯಾನಿಕಲ್ ಎಂಜಿನಿಯರ್ ಹನುಮಂತಪ್ಪ ಮತ್ತಿತರರು ಭಾಗವಹಿಸಿದ್ದರು.
ವಕೀಲ ಎಂ.ಬಿ. ಜಾಡರ್ ಇವರು ವಿಕಲಚೇತನರಿ ಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಇರುವ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರು. ರಾಣೇಬೆನ್ನೂರು ತಾಲ್ಲೂಕು ಸೇವಾ ಸಮಿತಿ, ರಾಣೇಬೆನ್ನೂರು ನ್ಯಾಯವಾದಿಗಳ ಸಂಘ ಹಾಗೂ ಸ್ನೇಹದೀಪ ಅಂಧ, ಅಂಗವಿಕಲರ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಕಾನೂನು ಅರಿವು, ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.