ಹರಿಹರ ತಾ. ಕುಂಬಳೂರು ಗ್ರಾಮದ ವಾಸಿ ದಿ. ಕಮ್ಮಾರಗಟ್ಟಿ ನಿಂಗಪ್ಪ ಮತ್ತು ದಿ. ಹಾಲಮ್ಮ ಇವರ ಪುತ್ರರಾದ ಹಾಗೂ ಮಲೇಬೆನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷರೂ, ಹರಿಹರ ತಾ. ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷರೂ ಆದ ಶ್ರೀ ಕಮ್ಮಾರಗಟ್ಟಿ ಹನುಮಂತಪ್ಪ (60 ವರ್ಷ) ಇವರು, ದಿನಾಂಕ 4.12.2020 ರ ಶುಕ್ರವಾರ ಸಾಯಂಕಾಲ 5 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಇವರ ಜೊತೆ ಮಗಳು ರಾಜೇಶ್ವರಿ (32 ವರ್ಷ) ಮತ್ತು ಮೊಮ್ಮಗಳು ಶಿವಾನಿ (10 ವರ್ಷ) ಇವರೂ ಕೂಡಾ ನಿಧನರಾಗಿದ್ದು, ಇವರ ಅಂತ್ಯಕ್ರಿಯೆಯನ್ನು ದಿನಾಂಕ 5.12.2020 ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಕುಂಬಳೂರಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 22, 2025