ಎಲೇಬೇತೂರಿನ ಸರ್ಕಾರಿ ಶಾಲೆಯಲ್ಲಿ ಕನಕ ಜಯಂತಿ ಆಚರಣೆ

ದಾವಣಗೆರೆ, ಡಿ.3- ತಾಲ್ಲೂಕಿನ ಎಲೆಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕದಾಸರ 533ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಣ ಪ್ರೇಮಿಗಳು, ತಾಲ್ಲೂಕು ಕಸಾಪ ನಿರ್ದೇಶಕರಾದ ಎಂ. ಷಡಕ್ಷರಪ್ಪ, ಮುಖ್ಯ ಶಿಕ್ಷಕ ಶಿವಮೂರ್ತಿ, ಶಿಕ್ಷಕ ವೃಂದದವರು ಹಾಗೂ ಎಲೆಬೇತೂರು ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!