ಸೊಕ್ಕೆಯಲ್ಲಿ ರಕ್ತದಾನ ಶಿಬಿರ

ಜಗಳೂರು, ಡಿ.3- ರಕ್ತ ದಾನ ಶ್ರೇಷ್ಠ ದಾನ, ಇನ್ನೊಬ್ಬರ ಜೀವ ಉಳಿಸಲು ಸಹಾಯ ವಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಒಬಿಸಿ ಘಟಕದ ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಗಿಡ್ಡನಕಟ್ಟೆ ತಿಳಿಸಿದರು.

ತಾಲ್ಲೂಕಿನ ಸೊಕ್ಕೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ ಮುಂಭಾಗ ಸರ್ಕಾರಿ ಚಿಗಟೇರಿ ಜಿಲ್ಲಾಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಸೊಕ್ಕೆ ಹಾಗೂ ಯುವಕರ ತಂಡದ ಸಹಯೋಗದಲ್ಲಿ ಆಯೋಜಿಸಿದ್ದ 8 ನೇ ವರ್ಷದ  ರಕ್ತದಾನ ಶಿಬಿರದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಯುವಕರನ್ನು ಸನ್ಮಾನಿಸಿ ಮಾತನಾಡಿದರು.

ವಿಶೇಷವಾಗಿ ಎಪಿಎಂಸಿ ಸದಸ್ಯ ಗಡಿಮಾಕುಂಟೆ ಯು.ಜಿ. ಶಿವಕುಮಾರ್ ದಂಪತಿ ರಕ್ತದಾನದಲ್ಲಿ ಪಾಲ್ಗೊಂಡಿದ್ದು ಯುವಕರಿಗೆ ಸ್ಫೂರ್ತಿ ನೀಡಿತು. ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ್, ಸ್ಥಳೀಯ ಯುವಕರಾದ ಕೆ.ಹೆಚ್. ತಿಮ್ಮಣ್ಣ, ಡಿ. ಹನುಮಂತಪ್ಪ, ಸಾಫ್ಟ್‌ವೇರ್ ಇಂಜಿನಿಯರ್  ವೈ. ರವಿವರ್ಮ‌, ಮಲ್ಲೇಶ್, ಶ್ರೀನಿವಾಸ್, ಎಂ. ನಾಗರಾಜ್, ವೈ.ಬಿ. ಶ್ರೀಕಾಂತ್ ಭಾಗವಹಿಸಿದ್ದರು.

ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ತಾ.ಪಂ. ಸದಸ್ಯ ಗಡಿಮಾಕುಂಟೆ ಸಿದ್ದೇಶ್, ವಿ.ಎಸ್.ಎಸ್.ಎನ್ . ಅಧ್ಯಕ್ಷ‌ ಬಿಸ್ತುವಳ್ಳಿ ಬಾಬು, ಮುಖಂಡರಾದ  ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್ ಮ್ಯಾನೇಜರ್‌ ರಘು, ಡಾ. ರಂಗನಾಥ್, ದುರುಗೇಶ್ ಇನ್ನಿತರರಿದ್ದರು.

error: Content is protected !!