ಮಲೇಬೆನ್ನೂರು, ಡಿ.3- ಜಿಗಳಿ ಗ್ರಾಮದ ಗ್ರಾ.ಪಂ. ಕಚೇರಿ ಮತ್ತು ಸ.ಹಿ.ಪ್ರಾ ಶಾಲೆಯಲ್ಲಿ ದಾಸಶ್ರೇಷ್ಠ ಶ್ರೀ ಭಕ್ತ ಕನಕದಾಸರ 533ನೇ ಜಯಂತಿಯನ್ನು ಆಚರಿಸಲಾಯಿತು. ಸ.ಹಿ.ಪ್ರಾ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ನಾಗೇಶ್ ಅವರು, ಕನಕದಾಸರ ಬಗ್ಗೆ ತಿಳಿಸಿಕೊಟ್ಟರು.
ಎಸ್‌ಡಿಎಂಸಿ ಅಧ್ಯಕ್ಷ ಜಿ.ಆರ್.ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ರಶ್ಮಿ ವಿಜಯಭಾಸ್ಕರ್, ಸದಸ್ಯ ಬೀರಪ್ಪ, ಶ್ರೀ ರಂಗನಾಥ್ ಬಾಲಕೇಂದ್ರದ ಅಧ್ಯಕ್ಷ ಡಿ.ಪಿ.ಚಿದಾನಂದ, ಮುಖ್ಯ ಶಿಕ್ಷಕ ಕರಿಬಸಪ್ಪ, ಶಿಕ್ಷಕರಾದ ಶ್ರೀನಿವಾಸ್‌ರೆಡ್ಡಿ, ಲೋಕೇಶ್, ವೀಣಾ, ದೀಪಾ, ಜಯಶ್ರೀ, ಕುಸುಮಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗ್ರಾ.ಪಂ. ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪಿಡಿಓ ದಾಸರ ರವಿ ಪುಷ್ಪಾರ್ಚನೆ ಮಾಡಿದರು. ಗ್ರಾ.ಪಂ. ನ ಬಿ.ದಾನಪ್ಪ, ಬಿ.ಮೌನೇಶ್, ಪ್ರಕಾಶ್, ಬಸವರಾಜಯ್ಯ, ಮುತ್ತು, ರಂಗನಾಥ್, ರಂಗಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.