ಜಗಳೂರಿನಲ್ಲಿ ಕನಕ ಜಯಂತಿ

ಜಗಳೂರು, ಡಿ.3- ತಾಲ್ಲೂಕು ಆಡಳಿತದ ವತಿಯಿಂದ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಮಿನಿ ವಿಧಾನ ಸೌಧದಲ್ಲಿ ಸರಳವಾಗಿ ಆಚರಿಸಲಾಯಿತು. ಶಾಸಕರು, ಶ್ರೀ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಎಸ್.ವಿ. ರಾಮಚಂದ್ರ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. 

ತಹಶೀಲ್ದಾರ್ ಡಾ. ನಾಗವೇಣಿ, ಸಮಾಜಕಲ್ಯಾಣ  ಇಲಾಖೆಯ ಸಹಾಯಕ ನಿರ್ದೇಶಕ ಬಿ. ಮಹೇಶ್, ಉಪ ನೋಂದಣಾಧಿಕಾರಿ ಹೇಮೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕು ಕುರುಬ ಸಮಾಜದ ಮುಖಂಡರಾದ ಎಲ್.ಬಿ. ಭೈರೇಶ್, ಗಿರೀಶ್ ಒಡೆಯರ್, ಕರಿಬಸಪ್ಪ, ಹೆಚ್. ನಾಗರಾಜ್, ಜಿ.ಪಂ. ಸದಸ್ಯ ಎಸ್.ಕೆ. ಮಂಜುನಾಥ್, ಮುಖಂಡರಾದ ಕೆ.ಬಿ. ಕಲ್ಲೇರುದ್ರೇಶ್, ಶಿವನಗೌಡ್ರು, ಪ.ಪಂ. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಮತ್ತು ಸದಸ್ಯರು ಭಾಗವಹಿಸಿದ್ದರು.

error: Content is protected !!