ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಗೆ ನಾಲ್ವರ ನೇಮಕ

ದಾವಣಗೆರೆ - ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಗೆ ನಾಲ್ವರ ನೇಮಕ - Janathavaniದಾವಣಗೆರೆ,ಡಿ.2- ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಗೆ ನಾಲ್ವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೃತ್ತಿಪರ ನಿರ್ದೇಶಕರುಗಳನ್ನಾಗಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಆರ್.ವಿ. ಶಿರಸಾಲಿಮಠ್, ಲೆಕ್ಕ ಪರಿಶೋಧಕ ಕಿರಣ್ ಆರ್. ಶೆಟ್ಟಿ, ವಿಶೇಷ ಆಹ್ವಾನಿತರುಗಳನ್ನಾಗಿ ಹರಿಹರದ ಜಿ.ಕೆ.ವೀರಣ್ಣ ಮತ್ತು ಸ್ಥಳೀಯ ಶ್ರೀಮತಿ ಉಮಾ ವಾಗೀಶ್ ಅವರುಗಳನ್ನು ನೇಮಕ ಮಾಡಲಾಗಿದೆ.

ಬ್ಯಾಂಕಿನ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಅವರ ಅಧ್ಯಕ್ಷತೆಯಲ್ಲಿ ಮೊನ್ನೆ ನಡೆದ ಬ್ಯಾಂಕಿನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ಈ ನೇಮಕ ನಡೆಯಿತು.

ಉಪಾಧ್ಯಕ್ಷ ಕಿರುವಾಡಿ ವಿ. ಸೋಮಶೇಖರ್, ನಿರ್ದೇಶಕರುಗಳಾದ ರಮಣ್‌ಲಾಲ್ ಪಿ. ಸಂಘವಿ, ಎಸ್.ಕೆ. ವೀರಣ್ಣ, ಎ.ಹೆಚ್. ಕುಬೇರಪ್ಪ, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಕೃಷ್ಣ ಸಾ ಭೂತೆ, ಶಂಕರ್ ಖಟಾವ್ ಕರ್, ಎಸ್. ಕೆ. ಪ್ರಭುಪ್ರಸಾದ್, ಶ್ರೀಮತಿ ಪಿ.ಎಂ. ಶಶಿಕಲಾ ರುದ್ರಯ್ಯ, ಕೆ.ಎಂ. ಜ್ಯೋತಿ ಪ್ರಕಾಶ್, ಪಿ.ಹೆಚ್.ವೆಂಕಪ್ಪ, ಬಿ.ನಾಗೇಂದ್ರ ಚಾರಿ, ಕೆ.ಹೆಚ್. ಶಿವಯೋಗಪ್ಪ, ಅನಿಲಾ ಇಂದೂಧರ್ ನಿಶಾನಿಮಠ್ ಸಭೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ. ಶಿವಲಿಂಗಸ್ವಾಮಿ ಸಭೆಯನ್ನು ನಿರ್ವಹಿಸಿದರು.

error: Content is protected !!