ಶಿವಮೊಗ್ಗ, ನ.30- ಭದ್ರಾ ಕಾಡಾ ಸಮಿತಿಗೆ ಏಳು ಜನರನ್ನು ಸದಸ್ಯರುಗಳನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಹರಿಹರ ತಾಲ್ಲೂಕಿನ ಗೋವಿನಾಳ್ ಗ್ರಾಮದ ಕೆ.ಇ. ರಾಜಣ್ಣ, ಹೊನ್ನಾಳಿ ತಾಲ್ಲೂಕು ಹುಣಸಘಟ್ಟದ ಹೆಚ್.ಎ. ಹನುಮಂತಪ್ಪ, ದಾವಣಗರೆ ತಾಲ್ಲೂಕು ಆವರಗೊಳ್ಳದ ಷಣ್ಮುಖಯ್ಯ, ದಾವಣಗೆರೆಯ ಶ್ರೀಮತಿ ನಾಗರತ್ನ ಆರ್.ನಾಯ್ಕ, ಭದ್ರಾವತಿ ತಾಲ್ಲೂಕಿನ ಮಲ್ಲಾಪುರದ ಸದಾಶಿವಪ್ಪ ಗೌಡ್ರು, ಕಡೂರು ತಾಲ್ಲೂಕು ಹುಲಿಕೇರಿಯ ಮಂಜುನಾಥ್, ತರೀಕೆರೆ ತಾಲ್ಲೂಕು ರಂಗೇನಹಳ್ಳಿಯ ಪಿ.ವಿನಾಯಕ ಅವರುಗಳು ಕಾಡಾ ಸಮಿತಿಗೆ ನೇಮಕಗೊಂಡಿದ್ದಾರೆ.