ದಾವಣಗೆರೆ,ನ.28- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಲಹೆಗಾರರೂ, ಬಾಪೂಜಿ ಸಹಕಾರಿ ಬ್ಯಾಂಕಿನ ನಿರ್ದೇಶಕರೂ ಆಗಿರುವ ಡಾ.ಎಂ.ಜಿ. ಈಶ್ವರಪ್ಪ ಅವರನ್ನು ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಗೌರವಿಸಲಾಯಿತು. ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ನಡೆದ ಸರಳ ಸಮಾರಂಭದಲ್ಲಿ ಈಶ್ವರಪ್ಪ ಅವರನ್ನು ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಅವರು ಶಾಲು ಹೊದಿಸಿ ಸನ್ಮಾನಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಕಿರುವಾಡಿ ಸೋಮಶೇಖರ್, ನಿರ್ದೇಶಕರುಗಳಾದ ಎ.ಹೆಚ್. ಕುಬೇರಪ್ಪ, ಎಸ್. ಕೆ. ವೀರಣ್ಣ, ರಮಣಲಾಲ್ ಪಿ. ಸಂಘಿ, ಕೃಷ್ಣ ಸಾ ಭೂತೆ, ಶಂಕರ್ ಖಟಾವ್ ಕರ್, ಎಸ್.ಕೆ. ಪ್ರಭು ಪ್ರಸಾದ್, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಶ್ರೀಮತಿ ಪಿ.ಎಂ. ಶಶಿಕಲಾ ರುದ್ರಯ್ಯ, ಕೆ.ಎಂ. ಜ್ಯೋತಿಪ್ರಕಾಶ್, ಶ್ರೀಮತಿ ಅನಿಲ ಇಂದೂಧರ್ ನಿಶಾನಿಮಠ, ಪಿ.ಹೆಚ್. ವೆಂಕಪ್ಪ, ಬಿ.ನಾಗೇಂದ್ರಚಾರಿ, ಕೆ.ಹೆಚ್. ಶಿವಯೋಗಪ್ಪ, ಪ್ರಧಾನ ವ್ಯವಸ್ಥಾಪಕ ಎಂ. ಶಿವಲಿಂಗಸ್ವಾಮಿ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
December 26, 2024