ಜಗಳೂರು, ನ.29- ತಾಲ್ಲೂಕಿನ ರಂಗಯ್ಯನದುರ್ಗ ಕೊಂಡುಕುರಿ ವನ್ಯಧಾ ಮದಿಂದ ತಾಯಿಯನ್ನು ಬೇರ್ಪಟ್ಟ ನಾಲ್ಕು ತಿಂಗಳ ಕೊಂಡುಕುರಿ ಮರಿಯೊಂದು ದಿದ್ದಿಗಿ ಪಂಚಾಯಿತಿ ವ್ಯಾಪ್ತಿಯ ಹೊಸದುರ್ಗ ಗ್ರಾಮದ ಕುರಿ ಮಂದೆಯ ಜೊತೆ ನಾಡಿಗೆ ಬಂದಿರುವ ಘಟನೆ ವರದಿಯಾಗಿದೆ.
ಕುರಿಗಾಹಿ ನರಸಿಂಹ ಎನ್ನುವರು ರಂಗಯ್ಯನದುರ್ಗ ವನ್ಯಧಾಮದಲ್ಲಿ ಕುರಿಗಳನ್ನು ಮೇಯಿಸಲು ತೆರಳಿದ್ದು, ಸಂಜೆ ಕುರಿ ಮೇಯಿಸಿ ಅರಣ್ಯದಿಂದ ಹಿಂದಿರುಗುವಾಗ ಕುರಿಯ ಜೊತೆಯಲ್ಲಿ ಕೊಂಡುಕುರಿ ಮರಿಯು ತಾಯಿಯಿಂದ ಬೇರ್ಪಟ್ಟು, ಕುರಿಯ ಹಿಂಡಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕುರಿಗಾಹಿ ನರಸಿಂಹ ಅವರು ಅರಣ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಿದಾಗ ಇಲಾಖೆಯವರು ಮರಿಯನ್ನು ಸಂರಕ್ಷಿಸಿ, ನಾಲ್ಕೈದು ದಿನಗಳಿಂದ ಉರ್ಲಕಟ್ಟೆ ಬೇಟೆ ನಿಗ್ರಹ ತಡೆ ಶಿಬಿರದಲ್ಲಿ ಇರಿಸಲಾಗಿದೆ. ತಾಯಿಯಿಂದ ಬೇರ್ಪಟ್ಟ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂ ದಿಯು ಆರೈಕೆ ಮಾಡುತ್ತಿದ್ದು, ಮೇಯಲು ತೊಗರಿ ಸೊಪ್ಪು ಹಾಗೂ ಮೇಕೆ ಹಾಲು ನೀಡುತ್ತಿದ್ದಾರೆ.
ಅಲ್ಲದೇ ತಾಯಿ ಜೊತೆ ಸೇರಿಸುವುದಕ್ಕೆ ಅದು ಎಲ್ಲಿ ಸಿಕ್ಕಿತ್ತೋ ಅಲ್ಲಿನ ನೀರು ಸೆಲೆ ಇರುವ ಗೋಕಟ್ಟೆಯ ಹತ್ತಿರದಲ್ಲಿ ಬಿಟ್ಟು ಅದನ್ನು ವಿಕ್ಷಣೆ ಮಾಡಲು ಇಬ್ಬರು ಅರಣ್ಯ ಇಲಾಖೆಯ ಸಿಬ್ಬಂದಿ ಯನ್ನು ನೇಮಕ ಮಾಡಲಾಗಿದೆ ಎಂದು ಅರಣ್ಯಧಿಕಾರಿ ಮಾಹಿತಿ ನೀಡಿದ್ದಾರೆ.