ಸಮಾನ ಹಕ್ಕು, ಸುರಕ್ಷತೆಯನ್ನು ಸಂವಿಧಾನ ನೀಡಿದೆ

ಹರಪನಹಳ್ಳಿ, ನ.27- ಸಮಾನ ಹಕ್ಕು ಹಾಗೂ ಸುರಕ್ಷತೆಯನ್ನು ನಮ್ಮ ಸಂವಿಧಾನ ನೀಡಿದೆ. ಪ್ರಜೆಗಳು ಪ್ರಶ್ನಿಸುವ ಹಕ್ಕನ್ನು ನೀಡಿರುವುದು ಸಂವಿಧಾನವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

ಪಟ್ಟಣದ ನ್ಯಾಯಾಲಯ ಆವರಣ ದಲ್ಲಿರುವ ವಕೀಲರ ಸಂಘದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಏಕತಾ ಸಪ್ತಾಹ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅನ್ಯ ದೇಶಗಳಲ್ಲಿ ಬಹುಸಂಖ್ಯಾತರ ಧರ್ಮಗಳೇ ಕಾನೂನಿನ ಗ್ರಂಥಗಳು. ಆದರೆ ಭಾರತ ದೇಶದಲ್ಲಿ ಎಲ್ಲಾ ಧರ್ಮದವರಿಗೂ ಸಂವಿಧಾನವೇ ಪವಿತ್ರವಾಗಿ ರಚಿತವಾಗಿರುವುದು ನಮ್ಮ ಹೆಮ್ಮೆ ಎಂದರು. 

ವಕೀಲ ಬಿ. ಕೃಷ್ಣಮೂರ್ತಿ, ಪಿಎಸ್‌ಐ ಪ್ರಕಾಶ್ ಮಾತನಾಡಿದರು. ಕಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ. ಶೋಭಾ, ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರಗೌಡ, ಉಪಾಧ್ಯಕ್ಷ ಟಿ. ವೆಂಕಟೇಶ್, ಕಾರ್ಯದರ್ಶಿ ಕೆ. ಬಸವರಾಜ್, ಅಪರ ಸರ್ಕಾರಿ ವಕೀಲರಾದ ಮಂಜುನಾಥ ಕಣಿವಿಹಳ್ಲಿ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎ.ಎಂ. ಬಸವರಾಜು, ವಕೀಲರಾದ ಮೃತ್ಯುಂಜಯ ಇನ್ನಿತರರಿದ್ದರು.

error: Content is protected !!