ಹರಿಹರ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ
ಮಲೇಬೆನ್ನೂರು, ನ.27- ನಾಗರಿಕರಿಗೆ ನಿಗದಿತ ಕಾಲಮಿತಿಯೊಳಗೆ ಅಗತ್ಯ ಸೇವೆಗ ಳನ್ನು ಪಡೆಯುವ ಅಧಿಕಾರ `ಸಕಾಲ’ದಲ್ಲಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಸಕಾಲ ಸಪ್ತಾಹದ ಅಂಗವಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಇದೇ ದಿನಾಂಕ 30 ರಿಂದ ಡಿಸೆಂಬರ್ 5ರವರೆಗೆ ಸಕಾಲ ಸಪ್ತಾಹ ಆಚ ರಣೆ ಇದ್ದು, ಈ ವೇಳೆ ಜನರಿಗೆ ಸ ಕಾಲದ ಬಗ್ಗೆ ಜಾಥಾ ಮೂಲಕ ಮಾಹಿತಿ ನೀಡಲಾಗುವುದು.
98 ಇಲಾಖೆಗಳ 1025 ಸೇವೆಗಳು ಸಕಾ ಲದಲ್ಲಿ ನಾಗರಿಕರಿಗೆ ಲಭ್ಯವಿರುತ್ತವೆ. ಸೇವಾ ವಿತರಣೆಯಲ್ಲಿ ವಿಳಂಬ ಅಥವಾ ಸಮರ್ಥನೀ ಯವಲ್ಲದ ತಿರಸ್ಕೃತ ಸಂದರ್ಭದಲ್ಲಿ ಅರ್ಜಿದಾ ರರು ಮೇಲ್ಮನವಿ ಸಲ್ಲಿಸಬಹುದೆಂದು ತಹಶೀ ಲ್ದಾರ್ ರಾಮಚಂದ್ರಪ್ಪ ತಿಳಿಸಿದರು. ಸಕಾಲದಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಇಂದು-ನಾಳೆ ಎಂಬ ನೆಪ ಹೇಳದೆ ಹೇಳಿದ ದಿನವೇ ಸೌಲಭ್ಯ ದೊರಕಿಸಿಕೊಡಲಾಗುವುದೆಂದರು.
ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ನಾಗರಿಕರು ಜನನ-ಮರಣ ಪತ್ರಗಳು ಮತ್ತು ಕಟ್ಟಡ ಪರವಾನಗಿಯನ್ನೂ ಸಕಾಲದಲ್ಲಿ ಪಡೆಯಬಹುದೆಂದು ಹೇಳಿದರು.
ಉಪತಹಶೀಲ್ದಾರ್ ಆರ್. ರವಿ ಮಾತನಾಡಿ, `ಸಕಾಲ’ದಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ. ಜನರು ಇದರ ಬಗ್ಗೆ ತಿಳಿದುಕೊಂಡು ಅರ್ಜಿ ಸಲ್ಲಿಸಬೇಕೆಂದು ಮನವಿ ಮಾಡಿದರು.
ಕಂದಾಯ ನಿರೀಕ್ಷಕ ಸಮೀರ್, ಪುರಸಭೆ ಸದಸ್ಯ ಮಾಸಣಗಿ ಶೇಖರಪ್ಪ, ಗ್ರಾಮಲೆಕ್ಕಾಧಿ ಕಾರಿಗಳಾದ ಕೊಟ್ರೇಶ್, ಶ್ರೀಧರಮೂರ್ತಿ, ಸೌಮ್ಯ, ಮಂಜುಳಾ ಬೋರಯ್ಯ, ರಾಮಕೃಷ್ಣ, ಪುರಸಭೆ ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ನವೀನ್, ಇಬ್ರಾನ್, ಚಿತ್ತಪ್ಪ ಮತ್ತಿತರರು ಸುದ್ಧಿಗೋಷ್ಠಿಯಲ್ಲಿದ್ದರು.