ರಸ್ತೆ ಕಾಮಗಾರಿಗೆ ಎಸ್ಸೆಸ್ ಚಾಲನೆ

ದಾವಣಗೆರೆ, ನ. 27- ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರ ಸ್ಥಳೀಯ ಪ್ರದೇಶಾ ಭಿವೃದ್ಧಿ  ಅನುದಾನದಡಿ ಪಾಲಿಕೆಯ 7ನೇ ವಾರ್ಡ್‍ನ ಜಾಲಿನಗರದ 2ನೇ ಮುಖ್ಯರಸ್ತೆಯ 5ನೇ ಅಡ್ಡರಸ್ತೆಯಲ್ಲಿ  9.17 ಲಕ್ಷ ರೂ. ವೆಚ್ಚದ ಸಿ.ಸಿ.ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಸೆಸ್, ಈಗಾಗಲೇ ಜಾಲಿನಗರದ ಎಲ್ಲಾ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಬಹುತೇಕ ಎಲ್ಲಾ ರಸ್ತೆಗಳನ್ನು ಸಿ.ಸಿ.ರಸ್ತೆಗಳನ್ನಾಗಿ ಮಾಡಲಾಗಿದೆ.ಇನ್ನುಳಿದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ಜಾಲಿನಗರ ಸೇರಿದಂತೆ 7ನೇ ವಾರ್ಡ್‍ನ ದೇವರಾಜ ಅರಸು ಬಡಾವಣೆಯ ರಸ್ತೆಗಳನ್ನು ಸಹ ಅಭಿವೃದ್ಧಿ ಪಡಿಸಲಾಗಿತ್ತು. ಬಾಕಿಯಿರುವ ರಸ್ತೆಗಳನ್ನು ಶೀಘ್ರದಲ್ಲೇ  ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡಲಾಗುವುದು ಎಂದರು.

ಪಾಲಿಕೆ ಸದಸ್ಯ ವಿನಾಯಕ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ಜಿ.ಎಸ್.ಮಂಜುನಾಥ್ ಗಡಿಗುಡಾಳ್, ಕೆ.ಚಮನ್ ಸಾಬ್, ಉದಯಕುಮಾರ್, ಮುಖಂಡರುಗಳಾದ ಬಸ್ ಉಮೇಶ್, ಘನಿ ತಾಹೇರ್, ರಹಮತ್, ಖಾದರ್, ಖಲೀಲ್, ಸಮೀವುಲ್ಲಾ, ಅನಿಲ್ ಕುಮಾರ್, ಹಬೀಬ್, ಡಿಶ್ ಮಂಜುನಾಥ್, ಬಾಷಾ ಸಾಬ್, ಸತೀಶ್, ವೆಂಕಟೇಶ್, ರಾಜು, ಗಣೇಶ್, ಕುಮಾರ್ ಮತ್ತಿತರರಿದ್ದರು.

error: Content is protected !!