ಅಖಿಲ ಭಾರತ ಮುಷ್ಕರ ಹಿನ್ನೆಲೆ
ದಾವಣಗೆರೆ, ನ.24- ನಾಡಿದ್ದು ದಿನಾಂಕ 26ರ ಗುರುವಾರ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಔಷಧ ಮಾರಾಟ ಪ್ರತಿನಿಧಿಗಳ ಸಂಘದ ವತಿಯಿಂದ ನಗರದ ಗಡಿಯಾರದ ಕಂಬ ಮತ್ತು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಿ, ಮುಷ್ಕರಕ್ಕೆ ಸಾವಿ ರಾರು ಜನರ ಬೆಂಬಲ ಪಡೆಯಲಾಯಿತು.
ಔಷಧಿಗಳ ಬೆಲೆಗಳನ್ನು ಇಳಿಸಬೇಕು ಮತ್ತು ಔಷಧಿಗಳ ಮೇಲೆ ಜಿಎಸ್ ಟಿ ಹೇರಬಾರದು. ಸಾರ್ವಜನಿಕ ಔಷಧಿ ಕ್ಷೇತ್ರ ವನ್ನು ಬಲಪಡಿಸಿ, ಅಗತ್ಯ ಔಷಧಿಗಳ ನಿರಂ ತರ ಪೂರೈಕೆಯನ್ನು ಖಾತ್ರಿಪಡಿಸಿ, ಔಷಧ ಗಳು ಮತ್ತು ಲಸಿಕೆಗಳು ಕೈಗೆಟಕುವ ಬೆಲೆ ಯಲ್ಲಿ ದೊರೆಯುವಂತಾಗಬೇಕು. ಸಾರ್ವಜ ನಿಕ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ನಿಲ್ಲಿಸಿ, ಕೇಂದ್ರ ಸರ್ಕಾರವು ಯುನಿವರ್ಸಲ್ ಕೋಡ್ ಆಫ್ ಫಾರ್ಮಾ ಸ್ಯೂಟಿಕಲ್ ಪ್ರಾಕ್ಟೀಸ್ ಅನ್ನು ಜಾರಿಗೊಳಿಸಿ ಔಷಧ ಮಾರುಕಟ್ಟೆ ಯಲ್ಲಿಯ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು.
ಔಷಧಿಗಳ ಮತ್ತು ವೈದ್ಯ ಕೀಯ ಸಾಧನಗಳ ಆನ್‍ಲೈನ್ ಪ್ರಚಾರ ಹಾಗೂ ಆನ್‍ಲೈನ್ ವ್ಯಾಪಾರ ನಿಲ್ಲಿಸಬೇಕು. ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇರುವ ಎಸ್ ಪಿಇ ಕಾಯಿದೆ ಹಾಗೂ ಅದರ ನಿಯಮಾವಳಿ ರಕ್ಷಿಸಬೇಕು ಎಂದು ಸಂಘದ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಕೆ.ಹೆಚ್. ಆನಂದರಾಜು ಆಗ್ರಹಿಸಿದರು.
ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರ ಗಿರುವ ಕುಟುಂಬದವರ ಬ್ಯಾಂಕ್ ಖಾತೆಗೆ ಮಾಸಿಕ 7500 ರೂ. ಜಮಾ ಮಾಡಬೇಕು. ಅಗತ್ಯವಿರುವ ಪ್ರತೀ ಕುಟುಂಬದ ಸದಸ್ಯರಿಗೆ ತಿಂಗಳಿಗೆ 10 ಕಿಲೋ ಆಹಾರ ಧಾನ್ಯಗಳನ್ನು ವಿತರಿಸಬೇಕು. ಉದ್ಯೋಗ ಖಾತ್ರಿ ಯೋಜ ನೆಯನ್ನು 200 ದಿನಗಳಿಗೆ ಹೆಚ್ಚಿಸಿ, ಕನಿಷ್ಟ 600 ರೂ. ದಿನಗೂಲಿ ಕೊಡಬೇಕು ಹಾಗೂ ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ರೈತ ವಿರೋಧಿ ಕಾನೂನುಗಳನ್ನು ಮತ್ತು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗ ಳನ್ನು ಹಿಂಪಡೆಯಬೇಕು.
ಶಿಕ್ಷಣ, ಆರೋಗ್ಯ, ರೈಲು, ರಸ್ತೆ, ವಿದ್ಯುತ್, ದೂರ ಸಂಪರ್ಕ, ವಿಮಾ, ಬ್ಯಾಂಕ್, ರಕ್ಷಣಾ ಕ್ಷೇತ್ರಗಳ ಖಾಸ ಗೀಕರಣ ತಡೆಯಬೇಕು. ಸರ್ಕಾರಿ ಹಾಗೂ ಸಾರ್ವತ್ರಿಕ ಕ್ಷೇತ್ರಗಳಲ್ಲಿ ರುವ ನೌಕರರಿಗೆ ಬಲವಂತದ ನಿವೃತ್ತಿ ಪಡೆಯುವ ಸುತ್ತೋಲೆ ಯನ್ನು ಹಿಂಪಡೆಯ ಬೇಕು. ಎನ್ ಪಿಎಸ್ ರದ್ದುಗೊಳಿಸಿ, ಹಳೆಯ ಪಿಂಚಣಿ ವ್ಯವಸ್ಥೆ ಯನ್ನೇ ಮುಂದುವರೆಸಬೇಕು. ಇಪಿಎಸ್-95 ಸರಿಪಡಿಸಿ ಪ್ರತಿಯೊಬ್ಬರಿಗೂ ಪಿಂಚಣಿ ಕೊಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಘಟಕದ ಕಾರ್ಯದರ್ಶಿ ಎಂ. ನವೀನಕುಮಾರ್, ಅಧ್ಯಕ್ಷ ಗಿರೀಶ್, ಖಜಾಂಚಿಗಳಾದ ವೆಂಕಟೇಶ್, ಮಹಾವೀರ, ಲೋಹಿತಾಶ್ವ, ಶ್ರೀಧರ, ಪ್ರಶಾಂತ ಸೇರಿದಂತೆ ಇತರರು ಇದ್ದರು.