ಐಸಿಆರ್ ಕೃಷಿ ಕೇಂದ್ರದಲ್ಲಿ ಕಡಲೆ ಬೆಳೆ ತರಬೇತಿ

ದಾವಣಗೆರೆ, ನ.14- ಐಸಿಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಗುಚ್ಚ ಗ್ರಾಮ ಮುಂ ಚೂಣಿ ಪ್ರಾತ್ಯಕ್ಷಿಕೆಯ ಅಂಗವಾಗಿ ಒಳ ಆವರಣದ ಕಡಲೆ ಬೆಳೆ  ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. 

ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ರೈತರು, ವಿಜ್ಞಾನಿಗಳು ಹೇಳುವ ನವೀನ ತಾಂತ್ರಿಕತೆಗಳನ್ನು ಬಳಸಿ, ಅಧಿಕ ಇಳುವರಿಯನ್ನು ಪಡೆಯಿರಿ ಎಂದರು. 

ಕೇಂದ್ರದ ಬೇಸಾಯ ತಜ್ಞ  ಮಲ್ಲಿಕಾರ್ಜುನ್ ಅವರು ಮಾತನಾಡಿ, ಕಡಲೆ ಬೆಳೆಯಲ್ಲಿ ಅಧಿಕ ಇಳುವರಿ ಕೊಡುವ ತಳಿ ಯಾದ ಜಾಕಿ 9218 ಬೆಳೆಯುವುದು ಸೂಕ್ತ ಹಾಗೂ ಜೈವಿಕ ಗೊಬ್ಬರಗಳಾದ ರೈಜೋಬಿಯಂ ಹಾಗೂ ಪಿಎಸ್‌ಬಿ 500 ಗ್ರಾಂ ಪ್ರತಿ ಎಕರೆ ಬೀಜಕ್ಕೆ ಬೀಜೋಪಚಾರ ಮಾಡಿ ಹಾಗೂ ಇದರ ಜೊತೆಗೆ ಟ್ರೈಕೋಡರ್ಮಾ ಶಿಲೀಂಧ್ರ ನಾಶಕ ವನ್ನು 4 ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಬೀಜೋಪಚಾರ ಮಾಡಿ, ಬಿತ್ತನೆ ಮಾಡುವುದು ಸೂಕ್ತ ಎಂದರು. 

ಕಾರ್ಯಕ್ರಮದಲ್ಲಿ ಕೇಂದ್ರದ ತೋಟಗಾರಿಕೆ ತಜ್ಞ ಎಂ.ಜಿ. ಬಸವನಗೌಡ ಹಾಗೂ ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಗ್ರಾಮದ ರೈತರು ಭಾಗವಹಿಸಿದ್ದರು.  

error: Content is protected !!