ಹರಿಹರ, ನ.13- ನಗರದ ಹೈಸ್ಕೂಲ್ ಬಡಾವಣೆಯ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ಶ್ರೀ ಶಾರದೇಶಾನಂದ ಸ್ವಾಮಿಗಳು ದೀಪಾವಳಿ ಹಬ್ಬದ ಆಚರಣೆಯ ಸವಿನೆನಪಿಗಾಗಿ ಹರಿಹರ ತಾಲ್ಲೂಕಿನ ಸಲಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಟ್ಟು 92 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ ಸೇರಿದಂತೆ ಹಲವಾರು ವಸ್ತುಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ, ಮಲ್ಲಿಕಾರ್ಜುನ ಅಂಗಡಿ, ಬಸವರಾಜ್ ಯಲಿಗಾರ, ವಿಜಯ, ಮಂಜಣ್ಣ, ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.