ತಿನಿಸಿನ ಸಾಮಗ್ರಿಗಳ ಆಟೋ ಪಲ್ಟಿ: ವ್ಯಾಪಾರಿ-ಚಾಲಕನ ಜೀವ ರಕ್ಷಣೆ
ದಾವಣಗೆರೆ, ನ.12- ಕಬ್ಬು ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯ ಚಾಲನೆ ಪರಿ ಣಾಮ ಡಿಕ್ಕಿ ಸಂಭವಿಸಿ ತಿನಿಸಿನ ಸಾಮಗ್ರಿಗಳ ಸರಕು ಸಾಗಿಸುತ್ತಿದ್ದ ಆಪೆ ಆಟೋ ಪಲ್ಟಿಯಾಗಿ ತಿನಿಸು ವ್ಯಾಪಾರಿ ಮತ್ತು ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿ ಪ್ರಾಣಾಪಾಯ ದಿಂದ ಪಾರಾದ ಘಟನೆ ನಗರದ ಹದಡಿ ರಸ್ತೆಯ ‘ಜನತಾ ವಾಣಿ’ ಕಚೇರಿ ಸಮೀಪದಲ್ಲಿ ಇಂದು ಸಂಜೆ ಸಂಭವಿಸಿತು.
ಬಸವಾಪಟ್ಟಣದ ತಿನಿಸಿನ ವ್ಯಾಪಾರಿ ದಾವಣಗೆರೆ ಯಲ್ಲಿ ಚಿಪ್ಸ್ ಮತ್ತಿತರೆ ತಿನಿಸಿನ ಸಾಮಗ್ರಿಗಳನ್ನು ಖರೀ ದಿಸಿ ಆಪೆ ಆಟೋದಲ್ಲಿ ಕುಂದೂರಿಗೆ ಹದಡಿ ರಸ್ತೆಯ ಮಾರ್ಗವಾಗಿ ಸಾಗಿಸುವಾಗ ಅದೇ ಮಾರ್ಗವಾಗಿ ಹಿಂದಿ ನಿಂದ ಬಂದ ಕುಕ್ಕುವಾಡ ಕಡೆಗೆ ಸಾಗುತ್ತಿದ್ದ ಕಬ್ಬಿನ ಟ್ಯಾಕ್ಟರ್ ಯಾವುದೇ ಅಂತರವಿಲ್ಲದೇ ಏಕಾಏಕಿ ಪಕ್ಕದಲ್ಲೇ ಸಾಗಿದ್ದು, ಇದರಿಂದ ಕಬ್ಬಿನ ದಿಂಡು ತಿನಿಸಿನ ಸಾಮಗ್ರಿಯುಳ್ಳ ಚೀಲಕ್ಕೆ ತಾಗಿದಾಗ ಆಟೋ ಪಲ್ಟಿ ಹೊಡೆಯಿತು.
ಆಟೋ ಡೋರ್ ಜಾಮ್ ಆಗಿ ಚಾಲಕ ಮತ್ತು ತಿನಿಸಿನ ವ್ಯಾಪಾರಿ ಒಳಗೆ ಸಿಲುಕಿದ್ದರು. ಪಲ್ಟಿಯಾದ ಜಾಗದ ಸಮೀಪವೇ ವಿದ್ಯುತ್ ಕಂಬ ಸಹ ಇತ್ತು. ಅಲ್ಲದೇ ವಾಹನಗಳ ಸಂಚಾರ ಸಹ ಹೆಚ್ಚಿತ್ತು. ಅದೃಷ್ಟವಶಾತ್ ಆಟೋ ಪಲ್ಟಿಯಾಗಿದ್ದನ್ನು ಕಂಡ ಮಾನವೀಯತೆ ಯುಳ್ಳ ನಾಗರಿಕರು ತಕ್ಷಣವೇ ಚಾಲಕ ಮತ್ತು ತಿನಿಸಿನ ವ್ಯಾಪಾರಿಯನ್ನು ರಕ್ಷಿಸಿ ಉಪಚರಿಸಿ ಪ್ರಾಣಾಪಾಯದಿಂದ ಪಾರು ಮಾಡಿದರು. ತಿನಿಸಿನ ವ್ಯಾಪಾರಿಗೆ ಒಳಪಟ್ಟಿನ ನೋವು ಒಂದೆಡೆಯಾದರೆ, ಈ ಘಟನೆಯಿಂದ ಗಾಬರಿಯಾಗಿ ಕೆಲ ಕಾಲ ಮನಸ್ಸಿಗೆ ಆಘಾತ ಮಾಡಿಕೊಂಡಿದ್ದರು. ಆಗ ರಕ್ಷಣೆಗೆ ಬಂದವರು ಸಮಾಧಾನ ಮತ್ತು ಧೈರ್ಯ ತುಂಬಿದ್ದು ಕಂಡು ಬಂತು.
ಡಿಕ್ಕಿಪಡಿಸಿದ ಟ್ರ್ಯಾಕ್ಟರ್ ಚಾಲಕ ಯಾವುದೇ ಮಾನವೀಯತೆ ತೋರದೇ ಸಾಗಿದ್ದು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು. ಈ ಸಂಬಂಧ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.