ದೇಶದ ಸ್ವಾತಂತ್ರ್ಯ ನಂತರದ ಬೆಳವಣಿಗೆಗೆ ಕಾಂಗ್ರೆಸ್ ಕೊಡುಗೆ ಅಪಾರ
ದಾವಣಗೆರೆ, ಆ. 9 – ಸ್ವಾತಂತ್ರ್ಯ ಹೋರಾಟದ ಸುವರ್ಣ ಅಧ್ಯಾಯಗಳಲ್ಲೊಂದಾದ ಕ್ವಿಟ್ ಇಂಡಿಯಾ ದಿನವನ್ನು ಪ್ರತಿ ವರ್ಷ ಆಗಸ್ಟ್ 9ರಂದು ಆಚರಿಸುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾ ನಾಯಕರುಗಳನ್ನು ಸ್ಮರಿಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷವು ಜಿಲ್ಲಾಧ್ಯಕ್ಷ ಎಚ್.ಬಿ ಮಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಕ್ವಿಟ್ ಇಂಡಿಯಾ ಚಳವಳಿ ದಿನವನ್ನು ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಇಂದು ಆಚರಿಸಲಾಯಿತು.
ಪಕ್ಷದ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅನಿತಾಬಾಯಿ ಮಾಲತೇಶರಾವ್ ಜಾಧವ್, ಸೇವಾದಳದ ಡೋಲಿ ಚಂದ್ರು, ಯುವ ಕಾಂಗ್ರೆಸ್‍ನ ಸೈಯದ್ ಖಾಲಿದ್, ಇಬ್ರಾಹೀಂ ಕಲೀಲ್, ರಂಗಸ್ವಾಮಿ, ಮುಜಾಹಿದ್, ರಾಕೇಶ್, ಶ್ರೀಮತಿ ಆಶಾ ರಾಣಿ ಮುರುಳಿ ಮಾತನಾಡಿ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಕ್ವಿಟ್ ಇಂಡಿಯಾ ಚಳವಳಿಗೆ ಮಹಾತ್ಮಗಾಂಧಿಜಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೇಶದ ಹಲವು ಬ್ರಿಟಿಷ್ ಪರ ಸಂಘಟನೆಗಳು ಬೆಂಬಲಿಸಿದರೂ ಸಹ ಚಳವಳಿಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಪಡೆಯಲಾಯಿತು ಎಂದು ತಿಳಿಸಿದರು.
ನಂತರ ನಡೆದ ದೇಶದ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾದುದು ಎಂದು ಬಣ್ಣಿಸಿದ ಅವರುಗಳು, ಚಳವಳಿಯ ಸುವರ್ಣ ಮಹೋತ್ಸವದ ಅಂಗವಾಗಿ 1992ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1 ರೂ. ನಾಣ್ಯವನ್ನು ಬಿಡುಗಡೆ ಮಾಡಿತ್ತು ಎಂದು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯ ದೇವರಮನಿ ಶಿವಕುಮಾರ್, ಸುಧಾ ಮಂಜುನಾಥ್, ಮುಖಂಡರುಗಳಾದ ಅಣಜಿ ಅಂಜಿನಪ್ಪ, ಹರೀಶ್ ಕೆ.ಎಲ್. ಬಸಾಪುರ, ಗೋವಿಂದ ಹಾಲೇಕಲ್ಲು, ಬಾತಿ ಶಿವಕುಮಾರ್, ಪ್ರವೀಣ್ ಕುಮಾರ್, ಹರೀಶ್ ಕೆಂಗಲಹಳ್ಳಿ, ರಾಘವೇಂದ್ರಗೌಡ, ಸದ್ದಾಂ, ಮೈನುದ್ದೀನ್, ಯುವರಾಜ್, ಸೇವಾದಳದ ರಮೇಶ್, ಜಬ್ಬಾರ್, ಮಹಿಳಾ ಘಟಕದ ಶುಭಮಂಗಳ, ದ್ರಾಕ್ಷಾಯಣಮ್ಮ, ರಹಜಾನ್ ದಾದಾಪೀರ್, ರಾಜೇಶ್ವರಿ, ಉಮಾ ಕುಮಾರ್, ಕೃಷ್ಣವೇಣಿ, ಗೀತಾ ಚಂದ್ರಶೇಖರ್ ಮತ್ತಿತರರಿದ್ದರು.