ರೈತರ ಕೃಷಿ ಚಟುವಟಿಕೆಗಳಿಗೆ ಆತಂಕ ಬೇಡ 

ರೈತರ ಕೃಷಿ ಚಟುವಟಿಕೆಗಳಿಗೆ ಆತಂಕ ಬೇಡ  - Janathavaniದಾವಣಗೆರೆ, ಆ.7- ಭದ್ರಾ ಜಲಾಶಯದಲ್ಲಿ ಈ ಹಿಂದೆ 1400 – 1800 ಕ್ಯೂಸೆಕ್ಸ್ ಒಳಹರಿವು ಹೆಚ್ಚಾಗಿದ್ದು, ಜಲಾಶಯದ ಅಚ್ಚುಕಟ್ಟು ಪ್ರದೇಶಗಳಾದ ಕುದುರೆಮುಖ, ಬಾಳೆಹೊನ್ನೂರು, ಚಿಕ್ಕಮಗಳೂರು, ಕೊಪ್ಪ, ಎನ್.ಆರ್.ಪುರ ತರೀಕೆರೆ ಹಾಗೂ ಇನ್ನಿತರೆ ಅಚ್ಚುಕಟ್ಟು ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಒಳಹರಿವು 57477 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.

ಇದರಿಂದ ಜಲಾಶಯದ ನೀರಿನ ಮಟ್ಟ 159.5 ರಿಂದ 164.5 ಅಡಿಗಳಷ್ಟು ಹೆಚ್ಚಾಗಿದ್ದು, ಭದ್ರಾ ಜಲಾಶಯದ ಗರಿಷ್ಟ ಮಟ್ಟ  186 ಅಡಿ (71.535 ಟಿಎಂಸಿ) ಗಳಷ್ಟಾಗಿದ್ದು, ಜಲಾಶಯದಲ್ಲಿ ನೀರಿನ ಇಂದಿನ ಮಟ್ಟ 164 ಅಡಿ 5 ಇಂಚು ಇರುತ್ತದೆ. ಭದ್ರಾ ಬಲದಂಡೆ ನಾಲೆ ಮೂಲಕ  2189 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು,ಜಲಾಶಯಕ್ಕೆ ಇನ್ನೂ 4-5 ದಿನಗಳಲ್ಲಿ ಅತಿ ಹೆಚ್ಚಿನ ನೀರಿನ ಒಳಹರಿವು ಬರುವುದರಿಂದ 186 ಅಡಿಗಳಷ್ಟು ನೀರು ಸಂಗ್ರಹವಾಗಿ, ಜಲಾಶಯವು ಭರ್ತಿಯಾಗುವ ಸಾಧ್ಯತೆ ಇದೆ. 

ಹಾಗಾಗಿ ಭದ್ರಾ ಜಲಾಶಯದ ನೀರನ್ನುಕೃಷಿಗಾಗಿ ಅವಲಂಬಿಸಿರುವ ರೈತರು ಯಾವುದೇ ಆತಂಕಪಡದೇ ನಿರಾಂತಕವಾಗಿ ಭತ್ತ ನಾಟಿ ಮಾಡಲು ಮತ್ತು ಕೃಷಿ ಚಟುವಟಿಕೆಗಳನ್ನು ಕೈಗೊಳಬಹುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

error: Content is protected !!