ತುಂಬುತ್ತಿರುವ ಭದ್ರಾ : ಹೆಚ್ಚುವರಿ ನೀರು  ಅಪ್ಪರ್ ಭದ್ರಾಕ್ಕೆ ಕೊಡುವುದು ಸೂಕ್ತ

ತುಂಬುತ್ತಿರುವ ಭದ್ರಾ : ಹೆಚ್ಚುವರಿ ನೀರು  ಅಪ್ಪರ್ ಭದ್ರಾಕ್ಕೆ ಕೊಡುವುದು ಸೂಕ್ತ - Janathavaniದಾವಣಗೆರೆ,ಆ.7-ಭದ್ರಾ ಆಣೆಕಟ್ಟು ಕ್ಷಣಗಣನೆಯಲ್ಲಿ ತುಂಬಲಿದ್ದು, ತುಂಬಿದ ನೀರನ್ನು ನದಿಗೆ ಬಿಡುವುದರಿಂದ ಕೆಳ ಭಾಗದಲ್ಲಿ ಅನಾಹುತವಾಗಲಿದೆ ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್. ಲಿಂಗರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಅನಾಹುತವನ್ನು ತಪ್ಪಿಸಬೇಕೆಂದರೆ ಭದ್ರಾದಿಂದ 6 ಟಿಎಂಸಿ ನೀರನ್ನು ಅಪ್ಪರ್ ಭದ್ರಾಕ್ಕೆ ಕೊಡುವುದು ಸೂಕ್ತ. ಇದು ಕಾನೂನಿನಲ್ಲಿ ಅವಕಾಶವಿದ್ದು, ಈ ನೀರನ್ನು ಕೊಟ್ಟರೆ ಸ್ವಲ್ಪಮಟ್ಟಿನ ಅನಾಹುತ ತಪ್ಪಿಸಬಹುದು (ವಾಣಿ ವಿಲಾಸ ಸಾಗರಕ್ಕೆ ನೀರು ಶೇಖರಣೆಯಾಗುತ್ತದೆ) ಎಂದು ಅವರು ಹೇಳಿದ್ದಾರೆ.

ಭದ್ರಾ ಅಣೆಕಟ್ಟೆಯ 71.535 ಟಿಎಂಸಿ ನೀರನ್ನು ಕಾಯ್ದುಕೊಳ್ಳಬೇಕು ಎಂದು ಸಂಬಂಧಿಸಿದ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಪತ್ರ ಮೂಲಕ ಲಿಂಗರಾಜ್ ಕೇಳಿಕೊಂಡಿದ್ದಾರೆ.

error: Content is protected !!