ಕಲಿಸುವ ದೇಗುಲ ಬಾಗಿಲು ಹಾಕಿದೆ
ಕಲಿಯುವ ಮನುಕುಲ ಕೂಲಿಗೆ ಸಾಗಿದೆ
ಕಲಿಸುವ ಗುರುಗಳ ಪರದಾಟ
ಮೊಬೈಲ್‌ಗೆ ಮನೆಯಲಿ ಗುದ್ದಾಟ
ಅಪ್ಪನ ಬೆವರಲಿ ಕಾಳಸಂತೆಯ ಸ್ನಾನ
ಶಾಲೆ ತೆರೆಯೋದು ಇನ್ನೂ ಅನುಮಾನ
ಮಮ್ಮಲ ಮರುಗಿದೆ ನಿತ್ಯದಿ ಹೆತ್ತಮ್ಮ
ಸೊರಗಿದೆ ಪಾಠವ ಕೇಳದೆ ಕಂದಮ್ಮ
ಶಿವಾನಂದ್ ಕರೂರ್ ಮಠ್
ದಾವಣಗೆರೆ.
[email protected]