ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಕೋವಿಡ್ ಮಾರ್ಗಸೂಚಿಗಳ ಪರಿಶೀಲನೆ
ದಾವಣಗೆರೆ, ನ.7- ಕೋವಿಡ್-19 ಮಾರ್ಗ ಸೂಚಿಗಳನ್ನು ಅನುಸರಿಸುತ್ತಿರುವ ಬಗ್ಗೆ ನಗರದ ಹದಡಿ ರಸ್ತೆಯಲ್ಲಿನ ಹಲವು ಅಂಗಡಿಗಳು ಹಾಗೂ ಶಾಪಿಂಗ್ ಮಾಲ್ ಗಳಿಗೆ ನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ ನೇತೃತ್ವದಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳ ತಂಡದಿಂದ ನಿನ್ನೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಯಿತು.
ಪರಿಶೀಲನೆ ಸಮಯ ದಲ್ಲಿ ಸಾರ್ವಜನಿಕರಿಗೆ ಸ್ಸಾನಿಟೈಸರ್ ನೀಡುತ್ತಿರುವ ಬಗ್ಗೆ, ಮಾಸ್ಕ್ ಧರಿಸಿರುವ ಬಗ್ಗೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿ ರುವ ಬಗ್ಗೆ ಪರಿಶೀಲಿಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಲಾಯಿತು. ಕೋವಿಡ್-19ರ ಮಾರ್ಗ ಸೂಚಿಗಳನ್ನು ಅನುಸರಿಸದಿ ದ್ದಲ್ಲಿ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗುವುದು ಎಂದು ಆಯುಕ್ತರು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯಾಧಿಕಾರಿಗಳು, ಕಂದಾಯ ಅಧಿಕಾರಿ ಗಳು ಹಾಗೂ ಆರೋಗ್ಯ ನಿರೀಕ್ಷಕರು ಭಾಗವಹಿಸಿದ್ದರು.