ರಾಣೇಬೆನ್ನೂರು, ಆ.4- ಇಲ್ಲಿನ ಸಮಾಜ ಸೇವಕಿ ಭಾರತಿ ಜಂಬಗಿ ಅವರ ನಿವಾಸದಲ್ಲಿ ಮನೆ ಮನೆಯಲ್ಲಿ ಶಿವಯೋಗ ಹಾಗೂ ವಚನ ಶ್ರಾವಣ ಕಾರ್ಯಕ್ರಮ ನಡೆಸಲಾಯಿತು. ಬಸವ ತತ್ವ ಚಿಂತಕಿ ಸುವರ್ಣ ಪಾಟೀಲ ಹಿರಿತನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರ ಜಂಬಗಿ, ಪೂರ್ಣಿಮ ಜಂಬಗಿ, ರಾಜೇಂದ್ರ ಜಂಬಗಿ, ಅರ್ಜುನ ಚಕ್ರಸಾಲಿ, ವೀಣಾ ಸೂರಣಗಿ, ಕಿರಣ್, ಭರತ್, ಮುಖೇಶ್, ವಚನಶ್ರೀ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಮಲೇಬೆನ್ನೂರು ಆ, 4- ಕುಂಬಳೂರು ಗ್ರಾಮದ ಹಿರಿಯ ಮುಖಂಡ ಮಾಗಾನಹಳ್ಳಿ ಹಾಲಪ್ಪ ಅವರ ಮನೆಯಲ್ಲಿ ಮಂಗಳವಾರ ಶ್ರಾವಣ ಮಾಸದ ಪ್ರಯುಕ್ತ ಮಂಗಳಗೌರಿ ವ್ರತ ಏರ್ಪಡಿಸಿ, ಮುತ್ತೈದೆಯರಿಗೆ ಬಾಗಿನ ನೀಡಲಾಯಿತು.