ಮಾನ್ಯರೇ,
ಎಂಸಿಸಿ ಬಿ ಬ್ಲಾಕ್‌ನಲ್ಲಿ ನಾವು ವಾಸವಾಗಿದ್ದು, ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ವರ್ಗದವರು ಆಗಮಿಸಿ ರಸ್ತೆಯ ಎಲ್ಲರನ್ನೂ ವಿಚಾರಿಸಿ, ಸೋಂಕಿತ ವ್ಯಕ್ತಿಯನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋದರು.
ಮಾರನೆ ದಿನ ರಸ್ತೆಯಲ್ಲಿ ಕಬ್ಬಿಣದ ಗೇಟ್‌ಗಳನ್ನು ಎರಡೂ ಬದಿ ಹಾಕಿ ಸೀಲ್‌ಡೌನ್ ಮಾಡಿ ಎಲ್ಲರೂ ಎಚ್ಚರಿಕೆಯಿಂದಿರುವಂತೆ ತಿಳಿಸಿದರು. ನರ್ಸ್ ಪ್ರತಿ ದಿನವೂ ಬಂದು ಸೀಲ್‌ಡೌನ್ ಮಾಡಿದ ಮನೆಗಳಲ್ಲಿ ಆರೋಗ್ಯ ವಿಚಾರಿಸುತ್ತಾರೆ. ಇದು ನಮ್ಮ ದಾವಣಗೆರೆಯ ಚಿತ್ರಣ. ನಮ್ಮ ದೇಶದ ಚಿತ್ರಣವೂ ಹೌದು.
ಆದರೆ ಅಮೇರಿಕಾದಲ್ಲಿ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ.ಕ್ಯಾಲಿಪೋರ್ನಿಯಾದಲ್ಲಿ ನನ್ನ ಮಗ ಕೆಲಸ ಮಾಡುತ್ತಿದ್ದು, ಅವರ ಅಕ್ಕಪಕ್ಕದ ಮನೆಯವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರೇ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಇಲ್ಲಿ ಜಾಗ ಇಲ್ಲ ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಿರುವರಂತೆ.
ನೀವೇ ಯೋಚಿಸಿ ಎಲ್ಲಿಯ ಭಾರತ, ಎಲ್ಲಿಯ ಅಮೇರಿಕಾ… ನಾಗರಿಕರ ಪರ ಇಷ್ಟು ಕಾಳಜಿವಹಿಸುತ್ತಿರುವ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪೌರ ಕಾರ್ಮಿಕರು, ಅಧಿಕಾರಿ ವರ್ಗದವರಿಗೆ ಅನಂತಾನಂತ ಧನ್ಯವಾದಗಳು.
–ಪಾಳೇಗಾರ್ ನಿರ್ಮಲ ಹಂಜಿ, ವಿಶ್ರಾಂತ ಉಪನ್ಯಾಸಕರು, ದಾವಣಗೆರೆ.