ಸಂಘ-ಸಂಸ್ಥೆಗಳ ಕಾರ್ಯ ಸಾಧನೆ ತಿಳಿಯಲು ದಾಖಲೆ ಸಹಕಾರಿ

ದಾವಣಗೆರೆ, ಆ. 1 – ಸಂಘ, ಸಂಸ್ಥೆಗಳು ಮಾಡಿರುವ ಕೆಲಸ, ಕಾರ್ಯ ಯೋಜನೆ ಹಾಗೂ ಸಾಧನೆ ಕುರಿತು ದಾಖಲೆ ಮಾಡಿಟ್ಟುಕೊಳ್ಳುವುದು ಒಳ್ಳೆಯ ಕೆಲಸ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.

ಅವರು ಜಿಲ್ಲಾ ಸರ್ಕಾರಿ ನೌಕರರ ಸಮುದಾಯ ಭವನದ ಮೇರಿ ದೇವಾಸಿಯ ಸಭಾಂಗಣದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾವು ಏನು ಮಾಡಿದ್ದೇವೆ ಎಂಬುದರ ಕುರಿತು ಅವಲೋಕನ ಮಾಡಿಕೊಳ್ಳಲು ಹಾಗೂ ಮುಂದಿನ ದಾರಿ ಕುರಿತು ಚರ್ಚಿಸಲು ದಾಖಲೆ ಇರಬೇಕಾಗಿದ್ದು, ಬೇರೆಯವರಿಗೆ ನಮ್ಮಯ ಕಾರ್ಯ ಸಾಧನೆ ತಿಳಿಯಲು ಸಹಕಾರಿಯಾಗಿದೆ ಎಂದರು.

ಕೊರೊನಾದಿಂದಾಗಿ ಬಹಳ ಕಠಿಣ ಪರಿಸ್ಥಿತಿ ಎದುರಾಗಿದ್ದು, ಮಹಾಮಾರಿಯನ್ನು ಎದುರಿಸಲು ಸನ್ನದ್ಧರಾಗಬೇಕಿದೆ. ಸರ್ಕಾರದ ಸೂಚನೆಯನ್ನು ಪಾಲಿಸುವ ಮೂಲಕ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಬೇಕಾಗಿದೆ ಎಂದರು.

ಸಂಘದ ಪದಾಧಿಕಾರಿಗಳ ಆಯ್ಕೆಯ ಪ್ರಥಮ ವರ್ಷದ ಹಿನ್ನೆಲೆಯಲ್ಲಿ `ಪ್ರಗತಿಯ ಹಾದಿಯಲ್ಲಿ’ ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷಿ, ಖಜಾಂಚಿ ಎಸ್. ಕಲ್ಲೇಶ್ವರಪ್ಪ, ಗೌರವಾಧ್ಯಕ್ಷ ಉಮೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಕಾಶ್, ಮಾರುತಿ, ಶಿವಣ್ಣ, ಚಂದ್ರ ಶೇಖರ್ ಇನ್ನಿತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!