ದಾವಣಗೆರೆ, ನ.5- ನಗರದ ಜಯದೇವ ವೃತ್ತದಲ್ಲಿ ರಾಷ್ಟ್ರವಾದಿ ಪತ್ರಕರ್ತ ಅನರ್ಬ್ ಗೋಸ್ವಾಮಿಯವರನ್ನು ಅಸಂವಿಧಾನಿಕವಾಗಿ ಬಂಧಿಸಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಅಧ್ಯಕ್ಷ ಆರ್.ಎಲ್.ಶಿವಪ್ರಕಾಶ್ ನೇತೃತ್ವದಲ್ಲಿ ಉದ್ಧವ್ ಠಾಕ್ರೆ ಅವರ ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಪಾಲಿಕೆ ಸದಸ್ಯರಾದ ಶಿವನಗೌಡ ಪಾಟೀಲ್, ತರಕಾರಿ ಶಿವು, ಜಿಲ್ಲಾ ಯುವ ಮೊರ್ಚಾ ಪದಾಧಿಕಾರಿಗಳಾದ ಶ್ರೀಕಾಂತ್ ನೀಲಗುಂದ, ಶಶಿಧರ್, ಕಿರಣ್, ಗುರು, ಕೆ.ವಿ.ಪ್ರಶಾಂತ್, ಕೆ.ಬಿ.ನರೇಂದ್ರ, ಜಿ.ಎಸ್.ಗಂಗಾಧರ್, ಉತ್ತರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ವೆರ್ಣೇಕರ್, ಪದಾಧಿಕಾರಿಗಳಾದ ಶಿವು, ಅರುಣ್ ಕೋಟೆ, ಹರೀಶ್ ಶಾಮನೂರು, ವಿವೇಕ್, ಅನಿಲ್, ರೇಣುಕಾ ಪ್ರಸನ್ನ, ರಾಜೇಶ್, ಕಿಶೋರ್, ರಘು, ಗಣೇಶ್ ಹಾಗೂ ದಾವಣ ಗೆರೆಯ ನಾಗರಿಕ ವೇದಿಕೆಯ ಪದಾಧಿಕಾರಿಗಳು, ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ್ ಹಾಗೂ ಪದಾಧಿಕಾರಿಗಳು, ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಭಜರಂಗಿ, ಪದಾಧಿಕಾರಿಗಳಾದ ಅಭಿಷೇಕ್, ಕಿರಣ್, ಗಣೇಶ್, ನ್ಯಾಷನಲಿಸ್ಟ್ ಮಹಿಳಾ ಸಮಾಜದ ಪದಾಧಿಕಾರಿಗಳಾದ ಮಮತಾ, ವಿಜಯಲಕ್ಷ್ಮಿ ಹಾಗೂ ಇತರೆ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.