ದಾವಣಗೆರೆ, ಆ. 1 – ಜಿಲ್ಲೆಯಲ್ಲಿ ಶನಿವಾರ 108 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಇದೇ ದಿನ 188 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಇದೇ ದಿನ ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಒಂದೇ ದಿನ ಭಾರೀ ಸಂಖ್ಯೆಯ ಸೋಂಕಿತರು ಗುಣವಾಗಿ ಬಿಡುಗಡೆಯಾಗಿರುವುದರಿಂದ ಸಕ್ರಿಯ ಸೋಂಕಿತರ ಸಂಖ್ಯೆ 764ಕ್ಕೆ ಇಳಿಕೆಯಾಗಿದೆ. ಮೃತರ ಸಂಖ್ಯೆ 52ಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಇದುವರೆಗೂ 2,206 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಹಾಗೂ 1,390 ಜನರು ಇಲ್ಲಿಯವರೆಗೆ ಗುಣವಾಗಿದ್ದಾರೆ.
ದಾವಣಗೆರೆ ತಾಲ್ಲೂಕಿನಲ್ಲಿ 73 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹರಿಹರದಲ್ಲಿ 12, ಜಗಳೂರಿನಲ್ಲಿ 8, ಚನ್ನಗಿರಿಯಲ್ಲಿ 6, ಹೊನ್ನಾಳಿಯಲ್ಲಿ 7 ಹಾಗೂ ಹೊರ ಜಿಲ್ಲೆಯ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.
ದಾವಣಗೆರೆ ತಾಲ್ಲೂಕಿನ 107 ಜನರು ಗುಣವಾಗಿ ಬಿಡುಗಡೆಯಾಗಿ ದ್ದಾರೆ. ಹರಿಹರದ 28, ಜಗಳೂರಿನ 17, ಚನ್ನಗಿರಿಯ 15, ಹೊನ್ನಾಳಿಯ 12 ಹಾಗೂ ಹೊರ ಜಿಲ್ಲೆಗಳ 9 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ.
ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ 48ವರ್ಷದ ಪುರುಷ ತರಳಬಾಳು ಬಡಾವಣೆಯ 82ರ ವೃದ್ಧ, ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ 25ರ ಪುರುಷ, ಭಗತ್ ಸಿಂಗ್ ನಗರದ 78ರ ವೃದ್ಧ, ಎಸ್.ಎಸ್. ಬಡಾವಣೆಯ 16ರ ಬಾಲಕ, ಆಜಾದ್ ನಗರದ 75ರ ವೃದ್ಧ, ವಿನೋಬನಗರದ 48ರ ಮಹಿಳೆ, ಆಂಜನೇಯ ಬಡಾವಣೆಯ 26ರ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಎಸ್.ಎಸ್. ಬಡಾವಣೆಯ 47ಹಾಗೂ 48ರ ಪುರುಷರು ಹಾಗೂ 48, 42ರ ಮಹಿಳೆಯರು, ಜಯನಗರದ 48ರ ಪುರುಷ, ಆವರಗೆರೆಯ 72ರ ವೃದ್ಧ, ವಿನೋಬನಗರದ 55ರ ಮಹಿಳೆ, ಭಗತ್ ಸಿಂಗ್ ನಗರದ 29ರ ಮಹಿಳೆ, ಚಿಕ್ಕಮ್ಮಣ್ಣಿ ಲೇಔಟ್ನ 25ರ ಮಹಿಳೆ, ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ 23ರ ಪುರುಷ, ಸರಸ್ವತಿ ನಗರದ 52ರ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸರಸ್ವತಿ ನಗರದ 23ರ ಪುರುಷ, ಭಗತ್ ಸಿಂಗ್ ನಗರದ 64ರ ಪುರುಷ, ನಿಟುವಳ್ಳಿ ಹೊಸ ಬಡಾವಣೆಯ 52ರ ಪುರುಷ, ಗಣೇಶ್ ಲೇಔಟ್ನ 49ರ ಮಹಿಳೆ, ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ 48ರ ಪುರುಷ, ಇ.ಎಸ್.ಐ. ಆಸ್ಪತ್ರೆಯ ಬಳಿಯ 19ರ ಯುವಕ, ಡಿ.ಎ.ಆರ್. ಕ್ವಾರ್ಟರ್ಸ್ನ 9ರ ಬಾಲಕಿ, ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ 20ರ ಪುರುಷ, ವಿವೇಕಾನಂದ ಬಡಾವಣೆಯ 40ರ ಮಹಿಳೆ, ಡಿ.ಎ.ಆರ್. ಕ್ವಾರ್ಟರ್ಸ್ನ 30ರ ಪುರುಷ, 12ರ ಬಾಲಕಿ, ಎಸ್.ಎಸ್. ಬಡಾವಣೆಯ 40, 49ರ ಪುರುಷರು, ಡಿ.ಎಸ್.ಆರ್. ಕ್ವಾರ್ಟರ್ಸ್ನ 30ರ ಮಹಿಳೆ, ಸಾಂಸ್ಥಿಕ ಕ್ವಾರಂಟೈನ್ನ 23ರ ಮಹಿಳೆ ಹಾಗೂ 32ರ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಎಸ್.ಒ.ಜಿ. ಕಾಲೋನಿಯ 33ರ ಪುರುಷ, ವಿದ್ಯಾನಗರದ 60ರ ಪುರುಷ, ಎ.ಕೆ. ಕಾಲೋನಿಯ 55ರ ಮಹಿಳೆ, ಜ್ಞಾನಶಂಕರದ 37ರ ಪುರುಷನಲ್ಲಿ ಸೋಂಕಿರುವುದು ಕಂಡು ಬಂದಿದೆ.
ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ 34, 65 ಹಾಗೂ 35ರ ಮಹಿಳೆಯರು, 27, 34 ಹಾಗೂ 43ರ ಪುರುಷರು, ಡಿ.ಎ.ಆರ್. ಪೊಲೀಸ್ ಕ್ವಾರ್ಟರ್ಸ್ನ 44ರ ಪುರುಷ, ಡಿ.ಸಿ.ಎಂ. ಲೇಔಟ್ನ 34ರ ಪುರುಷನಲ್ಲಿ ಸೋಂಕು ಕಂಡು ಬಂದಿದೆ.
ಖಾಸಗಿ ಆಸ್ಪತ್ರೆಯ ಸಿಬ್ಬಂದಿ, ಜಿಲ್ಲಾ ಆಸ್ಪತ್ರೆಯ 24, 31, 35 ಹಾಗೂ 29ರ ಸ್ಟ್ಯಾಫ್ ನರ್ಸ್ಗಳು, ಜಿಲ್ಲಾ ಆಸ್ಪತ್ರೆಯ 22ರ ತಾಂತ್ರಿಕ ಸಿಬ್ಬಂದಿ ಹಾಗೂ ಸರ್ಕಾರಿ ಆಸ್ಪತ್ರೆಯ 35ರ ಅಟೆಂಡರ್ಗಳಲ್ಲಿ ಸೋಂಕು ಪತ್ತೆಯಾಗಿದೆ.
ದಾವಣಗೆರೆ ತಾಲ್ಲೂಕು ನವಿಲೇಹಾಳ್ನ 43ರ ಪುರುಷ, ಬೇತೂರಿನ 70ರ ವೃದ್ಧ, ಕಕ್ಕರಗೊಳ್ಳದ 65ರ ಪುರುಷ, ಕುಂದೂರಿನ 65ರ ಪುರುಷ, ಬಾತಿಯ 40ರ ಪುರುಷ, ಆನಗೋಡಿನ 25ರ ಪುರುಷ ಹಾಗೂ 11ರ ಬಾಲಕ, ತುರ್ಚಘಟ್ಟದ ಐದು ವರ್ಷದ ಬಾಲಕನಲ್ಲಿ ಸೋಂಕು ಕಂಡು ಬಂದಿದೆ.
ಜಗಳೂರಿನ 80ರ ವೃದ್ಧೆ, 60 ಹಾಗೂ 21ರ ಪುರುಷರು, ರಾಮಾಲಯ ರಸ್ತೆಯ 21, 45 ಹಾಗೂ 50ರ ಪುರುಷರು, 40ರ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಹೊನ್ನಾಳಿಯ 74 ಹಾಗೂ 79ರ ವೃದ್ಧರು ಹಾಗೂ ಹೊನ್ನಾಳಿ ತಾಲ್ಲೂಕಿನ ಕುಂಬಾರಗುಂಡಿಯ 29ರ ಪುರುಷ, ಹೊಡೇನಹಳ್ಳಿಯ 22ರ ಪುರುಷ, 30ರ ಮಹಿಳೆ, ದುರ್ಗಿಗುಡಿಯ 70ರ ವೃದ್ಧೆಯರಲ್ಲಿ ಸೋಂಕು ಕಂಡು ಬಂದಿದೆ.
ಹರಿಹರ ವಿದ್ಯಾನಗರದ 38ರ ಪುರುಷ, 56ರ ಪುರುಷ, ಕಾಳಿದಾಸ ನಗರದ 25ರ ಪುರುಷ, 33ರ ಪುರುಷ, ಜೆ.ಸಿ. ಬಡಾವಣೆಯ 38ರ ಮಹಿಳೆ, ಆದಿಶಕ್ತಿನಗರದ 74ರ ವೃದ್ಧ, 19ರ ಯುವಕ, 30ರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ
ಹರಿಹರ ತಾಲ್ಲೂಕು ಹಾಲಿವಾಣದ 50ರ ಮಹಿಳೆ,ಹಳ್ಳದಕೆರೆಯ 75ರ ವೃದ್ಧ, ಕುಂಬಳೂರಿನ 58ರ ಮಹಿಳೆಯರಲ್ಲಿ ಸೋಂಕಿರುವುದು ಕಂಡು ಬಂದಿದೆ.
ಚನ್ನಗಿರಿಯ 24ರ ಮಹಿಳೆ ಹಾಗೂ ಚನ್ನಗಿರಿ ತಾಲ್ಲೂಕು ಕಬ್ಬಳದ 31ರ ಮಹಿಳೆ, ಕಂಚಿನಾಳದ 29ರ ಪುರುಷ, ಸಂತೇಬೆನ್ನೂರಿನ 36 ಹಾಗೂ 39ರ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ 76ರ ವೃದ್ಧ, ಹಾವೇರಿಯ ಕುರುಬರಕೇರಿಯ 56ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.
108 ಜನರಲ್ಲಿ ಸೋಂಕು ದೃಢ
ಬಿಡುಗಡೆಯಾದವರ ವಿವರ : ದಾವಣಗೆರೆಯ ಕುಂಬಾರಕೇರಿಯ 58ರ ಪುರುಷ, 50ರ ಮಹಿಳೆ, ಎಂಸಿಸಿ ಎ ಬ್ಲಾಕ್ನ 45ರ ಪುರುಷ, ಕೆ.ಟಿ.ಜೆ. ನಗರದ 35ರ ಮಹಿಳೆ, ಆಜಾದ್ ನಗರದ 72ರ ವೃದ್ಧ, ಕುವೆಂಪು ನಗರದ 40ರ ಪುರುಷ, ಕುವೆಂಪು ನಗರದ 40ರ ಪುರುಷ, ಸೈಯದ್ ಪೀರ್ ಬಡಾವಣೆಯ 42ರ ಪುರುಷ, ಬಡಾವಣೆ ಪೊಲೀಸ್ ಠಾಣೆಯ 46ರ ಪುರುಷ, ಪಿ.ಜೆ ಬಡಾವಣೆಯ 58ರ ಪುರುಷ, ಎಲ್.ಐ.ಸಿ. ಕಾಲೋನಿಯ 29ರ ಮಹಿಳೆ, ನಿಜಲಿಂಗಪ್ಪ ಬಡಾವಣೆಯ 45ರ ಪುರುಷ, ಎಂ.ಸಿಸಿ ಎ ಬ್ಲಾಕ್ನ 45ರ ಪುರುಷ, ನಾಯ್ಡು ಹೋಟೆಲ್ ಬಳಿಯ 55ರ ಪುರುಷ, ಜೆ.ಪಿ. ನಗರದ 21ರ ಮಹಿಳೆ, ಇಮಾಮ್ ನಗರದ 49ರ ಮಹಿಳೆ, ಎಂಸಿಸಿ ಬಿ ಬ್ಲಾಕ್ನ 25ರ ಮಹಿಳೆ, ಮುಸ್ತಫಾ ನಗರದ 54ರ ಪುರುಷ, ವಿದ್ಯಾನಗರದ 30ರ ಮಹಿಳೆ.
ಕುಂಬಾರ ಬೀದಿಯ 69ರ ಪುರುಷ, ಪಾಮೇನಹಳ್ಳಿಯ 20ರ ಮಹಿಳೆ, ಸರಸ್ವತಿ ನಗರದ 49ರ ಮಹಿಳೆ, ಬೀಡಿ ಲೇಔಟ್ನ 40ರ ಮಹಿಳೆ, ಇಜಾರ್ದಾರ್ ಗಲ್ಲಿಯ 52, 56 ಹಾಗೂ 30ರ ಪುರುಷರು, ಬಾಷಾನಗರದ 23ರ ಮಹಿಳೆ, ವಿದ್ಯಾನಗರದ 30ರ ಮಹಿಳೆ, ಎಂಸಿಸಿ ಎ ಬ್ಲಾಕ್ನ 16ರ ಯುವಕ, ಜೆ.ಹೆಚ್. ಪಟೇಲ್ ಬಡಾವಣೆಯ 68ರ ಮಹಿಳೆ, ಆರ್.ವಿ.ಕೆ. ಶಾಲೆಯ ಬಳಿಯ 35ರ ಪುರುಷ, ಆವರಗೆರೆಯ 44ರ ಮಹಿಳೆ, ಎಸ್.ಎಸ್. ಬಡಾವಣೆಯ 65ರ ಪುರುಷ.
ಎಂ.ಸಿ.ಸಿ. ಎ ಬ್ಲಾಕ್ನ 36ರ ಪುರುಷ, 38 ಹಾಗೂ 62ರ ಮಹಿಳೆ, ಪೊಲೀಸ್ ಕ್ವಾರ್ಟರ್ಸ್ನ 43ರ ಮಹಿಳೆ, ಆಜಾದ್ ನಗರದ 38ರ ಪುರುಷ, ಎಂಸಿಸಿ ಎ ಬ್ಲಾಕ್ನ 10ರ ಬಾಲಕ, 70 ಹಾಗೂ 78ರ ವೃದ್ಧೆಯರು, 93ರ ವೃದ್ಧ, 69ರ ಪುರುಷ, 4ರ ಬಾಲಕ, 43ರ ಪುರುಷ, ವಿನೋಬನಗರದ 65ರ ಪುರುಷ, ಆಜಾದ್ ನಗರದ 35 ಹಾಗೂ 49ರ ಮಹಿಳೆಯರು, ಆಜಾದ್ ನಗರದ 20 ಹಾಗೂ 54ರ ಪುರುಷರು, ದುಗ್ಗಮ್ಮನ ದೇವಾಲಯ ಬಳಿಯ 53ರ ಪುರುಷ.
ಬಸವರಾಜಪೇಟೆಯ 41 ಹಾಗೂ 45ರ ಪುರುಷರು, ಇಮಾಮ್ ನಗರದ 32ರ ಪುರುಷ, ಡಿಸಿಎಂ ಬಡಾವಣೆಯ 42ರ ಮಹಿಳೆ, ಶಿವಾಲಿ ಥಿಯೇಟರ್ ಬಳಿಯ 47ರ ಪುರುಷ, ಎಸ್.ಪಿ.ಎಸ್. ನಗರದ 48ರ ಪುರುಷ, ಎನ್.ಆರ್. ರಸ್ತೆಯ 59ರ ಮಹಿಳೆ ಹಾಗೂ 36ರ ಪುರುಷ, ನೂರಾನಿ ಮಸೀದಿ ರಸ್ತೆಯ 70ರ ವೃದ್ಧ, ತರಳಬಾಳು ಬಡಾವಣೆಯ 82ರ ವೃದ್ಧ, ಯಾತ್ರಿ ನಿವಾಸದ 27ರ ಪುರುಷ, ನಿಟುವಳ್ಳಿಯ 55ರ ಪುರುಷ, ಸರಸ್ವತಿ ಬಡಾವಣೆಯ 30ರ ಪುರುಷ, ಜಯನಗರದ 35ರ ಮಹಿಳೆ, ಬೀಡಿ ಲೇಔಟ್ನ 32ರ ಪುರುಷ, ನಿಟುವಳ್ಳಿಯ 27ರ ಪುರುಷ, ಚಾಮರಾಜ ಪೇಟೆಯ 37ರ ಮಹಿಳೆ, ಜಿಲ್ಲಾಸ್ಪತ್ರೆಯ 34ರ ಸ್ಟಾಫ್ ನರ್ಸ್, ವಿನಾಯಕ ನಗರದ 42ರ ಪುರುಷ ಹಾಗೂ 12ರ ಬಾಲಕಿ, ಆಜಾದ್ ನಗರದ 21ರ ಪುರುಷ, ಕೆ.ಟಿ.ಜೆ. ನಗರದ 87ರ ವೃದ್ಧ, ರಂಗನಾಥ ಬಡಾವಣೆಯ 59ರ ಪುರುಷ.
ಅಂಜನೇಯ ಬಡಾವಣೆಯ 58ರ ಮಹಿಳೆ, ಎಸ್.ಎಸ್. ಬಡಾವಣೆಯ 57ರ ಪುರುಷ, ಮಹಾಲಕ್ಷ್ಮಿ ಬಡಾವಣೆಯ 29ರ ಪುರುಷ, ನಿಟುವಳ್ಳಿಯ 43ರ ಪುರುಷ, ಮಹಾರಾಜ ಪೇಟೆಯ 51ರ ಮಹಿಳೆ, ವಿನೋಬನಗರದ 23ರ ಪುರುಷ, ಎಂಸಿಸಿ ಎ ಬ್ಲಾಕ್ನ 30ರ ಪುರುಷ, ನಿಟುವಳ್ಳಿಯ 14ರ ಬಾಲಕ, ಆಜಾದ್ ನಗರದ 33ರ ಪುರುಷ, ಎಸ್.ಎಸ್.ಎಂ. ನಗರದ 24ರ ಮಹಿಳೆ, ನಿಟುವಳ್ಳಿಯ 50ರ ಮಹಿಳೆ, ವಿನೋಬನಗರದ 65ರ ಮಹಿಳೆ.
ದಾವಣಗೆರೆ ತಾಲ್ಲೂಕು ಗೊಲ್ಲರಹಳ್ಳಿಯ 25ರ ಮಹಿಳೆ, ಬಿಳಿಚೋಡಿನ 13ರ ಬಾಲಕ ಹಾಗೂ 29ರ ಪುರುಷ, ಚಿಕ್ಕಮೇಗಳಗೆರೆಯ 18ರ ಯುವತಿ, ಬಸವನಾಳಿನ 42ರ ಪುರುಷ, ಅತ್ತಿಗೆರೆಯ 41ರ ಪುರುಷ, ಆನೆಕೊಂಡದ 33ರ ಪುರುಷ, ತೋಳಹುಣಸೆಯ 27ರ ಮಹಿಳೆ ಹಾಗೂ 38ರ ಪುರುಷ, ಅಗಸನಕಟ್ಟೆಯ 35ರ ಪುರುಷ.
ಹೊನ್ನಾಳಿಯ 36ರ ಪುರುಷ ಹಾಗೂ ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರೆಯ 48ರ ಮಹಿಳೆ, ಬೈರನಹಳ್ಳಿಯ 70ರ ವೃದ್ಧೆ ಹಾಗೂ 45ರ ಮಹಿಳೆ, ದುರ್ಗಿಗುಡಿಯ 57ರ ಪುರುಷ, ಕುಂಕುವದ 17ರ ಯುವಕ, ಕೆಂಚಿಕೊಪ್ಪದ 25ರ ಮಹಿಳೆ, ಕುಂದೂರಿನ 20ರ ಮಹಿಳೆ, ನ್ಯಾಮತಿ ತಾಲ್ಲೂಕಿನ ಹೊನ್ನಹಳ್ಳಿಯ 32ರ ಮಹಿಳೆ.
ಜಗಳೂರು ವಿದ್ಯಾನಗರದ 30ರ ಪುರುಷ, 63ರ ಮಹಿಳೆ ಹಾಗೂ ಜಗಳೂರು ತಾಲ್ಲೂಕು ಭೈರನಹಳ್ಳಿಯ 79ರ ವೃದ್ಧೆ, ಎರೆಹೊಸಳ್ಳಿಯ 75ರ ವೃದ್ಧೆ, ದೊಣೆಹಳ್ಳಿಯ 17ರ ಯುವಕ, ತೋರಣಗಟ್ಟೆಯ 75ರ ವೃದ್ಧೆ, ಒಂದು ವರ್ಷದ ಬಾಲಕ, ಬಿಳಿಚೋಡಿನ 2ರ ಗಂಡು ಮಗು, 14ರ ಬಾಲಕ, ಹೊರಕೆರೆಯ 14ರ ಬಾಲಕಿ, 19ರ ಯುವಕ, ಚಿಕ್ಕರಕೆರೆಯ 20ರ ಪುರುಷ, 21ರ ಮಹಿಳೆ, 65ರ ಪುರುಷ.
ಹರಿಹರ ವಿನಾಯಕನಗರದ 19ರ ಮಹಿಳೆ, ಕೆ.ಆರ್. ನಗರದ 18ರ ಪುರುಷ, ಬೆಂಕಿ ನಗರದ 65ರ ಪುರುಷ, ಕೆ.ಆರ್. ನಗರದ 40ರ ಮಹಿಳೆ, ಕೆ.ಎಸ್.ಆರ್.ಟಿ.ಸಿ.ಯ 32ರ ಪುರುಷ ಕಾಳಿದಾಸ ನಗರದ 26ರ ಪುರುಷ, ಗಾಂಧಿನಗರದ 76ರ ವೃದ್ಧೆ, ಸರ್ಕಾರಿ ಆಸ್ಪತ್ರೆಯ 32ರ ಮಹಿಳೆ, ಕುಂಬಾರ ಓಣಿಯ 98ರ ವೃದ್ಧೆ, ಹೆಚ್.ಎಸ್. ಬಡಾವಣೆಯ 28ರ ಪುರುಷ, ಸಾಂಸ್ಥಿಕ ಕ್ವಾರಂಟೈನ್ನ 36ರ ಪುರುಷ, ಜೆ.ಸಿ. ಬಡಾವಣೆಯ 23ರ ಮಹಿಳೆ, ಬೆಂಕಿನಗರದ 80ರ ವೃದ್ಧೆ, ಪ್ರಶಾಂತ ನಗರದ 34ರ ಮಹಿಳೆ, ಭಾರತ್ ಆಯಿಲ್ ಮಿಲ್ ಕಾಂಪೌಂಡ್ನ 36ರ ಪುರುಷ.
ಹರಿಹರ ತಾಲ್ಲೂಕು ಹರ್ಲಾಪುರದ 23ರ ಪುರುಷ, ಮಲೇಬೆನ್ನೂರಿನ 31 ಹಾಗೂ 45ರ ಪುರುಷರು, ಹೊಸಪಾಳ್ಯದ 26ರ ಮಹಿಳೆ, ಹನಗವಾಡಿಯ 30 ಹಾಗೂ 53ರ ಮಹಿಳೆಯರು.
ಚನ್ನಗಿರಿಯ 50ರ ಮಹಿಳೆ, 68ರ ಪುರುಷ, ದಿಗ್ಗೇನಹಳ್ಳಿ ರಸ್ತೆಯ 7 ಹಾಗೂ 12ರ ಬಾಲಕರು, 75ರ ವೃದ್ಧೆ, 65ರ ಪುರುಷ, 27ಹಾಗೂ 34ರ ಮಹಿಳೆಯರು,
ಚನ್ನಗಿರಿ ತಾಲ್ಲೂಕು ನಲ್ಲೂರಿನ 37 ಹಾಗೂ 45ರ ಪುರುಷರು, ತಣಿಗೆರೆಯ 19ರ ಯುವಕ, ಕೊಂಡದಹಳ್ಳಿಯ 38ರ ಮಹಿಳೆ, ಕೆರೆಬಿಳಚಿಯ 45ರ ಪುರುಷ,
ಹಾವೇರಿ ಜಿಲ್ಲೆ ರಾಣೇಬೆನ್ನೂರಿನ 34ರ ಮಹಿಳೆ, ನಂದಿಹಳ್ಳಿ ಕೋಡಿಯಾಲದ 27ರ ಮಹಿಳೆ, ಬಳ್ಳಾರಿ ಜಿಲ್ಲೆ ಹೊಸಪೇಟೆಯ 21ರ ಮಹಿಳೆ, ಹುಬ್ಬಳ್ಳಿಯ 61ರ ಪುರುಷ, ಬಳ್ಳಾರಿ ಜಿಲ್ಲೆ ಕೊಟ್ಟೂರಿನ 22ರ ಪುರುಷ ಹಾಗೂ 40ರ ಮಹಿಳೆ, ಹರಪನಹಳ್ಳಿ 30ರ ಮಹಿಳೆ.
ಮೃತರ ವಿವರ : ದಾವಣಗೆರೆ ನಗರದ ಬಸವರಾಜ ಪೇಟೆಯ 59 ವರ್ಷದ ಪುರುಷ ಮೃತಪಟ್ಟಿದ್ದು, ಇವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಜಾಲಿನಗರದ 80 ವರ್ಷದ ರಕ್ತದೊತ್ತಡದಿಂದ ಬಳಲುತ್ತಿದ್ದ ವೃದ್ಧೆ ಹಾಗೂ ಕೆ.ಟಿ.ಜೆ. ನಗರದ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ 63ರ ಪುರುಷ ಮೃತಪಟ್ಟಿದ್ದಾರೆ. ಚನ್ನಗಿರಿಯ ಪಿ.ಡಬ್ಲ್ಯೂ.ಡಿ. ರಸ್ತೆಯ 55ರ ಮಹಿಳೆ ಮೃತಪಟ್ಟಿದ್ದಾರೆ.