ಯಂತ್ರದ ಮುಖಾಂತರ ಭತ್ತದ ನಾಟಿಯ ಕ್ಷೇತ್ರೋತ್ಸವ

ದಾವಣಗೆರೆ, ನ.3- ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಯಂತ್ರದ ಮೂಲಕ ಭತ್ತ ನಾಟಿ ಮಾಡಿದ ತಾಕಿನಲ್ಲಿ ಕ್ಷೇತ್ರೋತ್ಸವವನ್ನು ಆಚರಿಸಲಾಯಿತು. ಪ್ರಗತಿಪರ ರೈತ ಗುರುಮೂರ್ತಿ ಅವರು ಯಂತ್ರದ ಮುಖಾಂತರ ನಾಟಿ ಮಾಡುವುದರಿಂದ ಇಳುವರಿಯಲ್ಲಿ ಯಾವುದೇ ವ್ಯತ್ಯಾಸವನ್ನು ಕಾಣುವುದಿಲ್ಲ ಹಾಗೂ ಖರ್ಚಿನಲ್ಲಿ ಪ್ರತಿ ಎಕರೆಗೆ ಸುಮಾರು ಐದರಿಂದ ಆರು ಸಾವಿರ ರೂ.ಗಳನ್ನು ಸಾಮಾನ್ಯ ಪದ್ಧತಿಗೆ ಹೋಲಿಸಿದರೆ, ಉಳಿತಾಯ ಮಾಡಬಹುದು ಎಂದರು. ಬೇಸಾಯ ತಜ್ಞರಾದ ಮಲ್ಲಿಕಾರ್ಜುನ್ ಅವರು ಮಾತನಾಡುತ್ತಾ ಇನ್ನು ಮುಂದಿನ ದಿನಗಳಲ್ಲಿ ನಾಟಿ ಮಾಡಲು ಕೂಲಿ ಕಾರ್ಮಿಕರ ಅಭಾವವಾಗುವುದರಿಂದ ಯಂತ್ರದ ಮುಖಾಂತರ ಭತ್ತದ ನಾಟಿ ಅನಿವಾರ್ಯವಾಗುತ್ತದೆ ಹಾಗೂ ಈ ಪದ್ಧತಿಯಿಂದ ಖರ್ಚನ್ನು ಕಡಿಮೆ ಮಾಡಬ ಹುದು. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು.

ಪ್ರಗತಿಪರ ರೈತರಾದ ಚಂದ್ರಕಾಂತ್   ಮಾತನಾಡಿ, ಭತ್ತಕ್ಕೆ ಯಾವುದೇ ರೀತಿಯ ಔಷಧಿಗಳನ್ನು ವಿನಾಕಾರಣ ಸಿಂಪರಣೆ ಮಾಡದಿರುವುದರಿಂದ ಖರ್ಚು ಕಡಿಮೆಯಾಗಿದೆ ಹಾಗೂ ವಿಜ್ಞಾನಿಗಳು ಹೇಳಿದ ರೀತಿಯಲ್ಲಿ ಬೇಸಾಯ ಕ್ರಮಗಳನ್ನು ಅನುಸರಿಸಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ವಿಜಯಕುಮಾರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮಲ್ಲಿಕಾರ್ಜುನ ಸ್ವಾಮಿ ಪ್ರಗತಿಪರ ರೈತರು ವಂದಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ರಘುರಾಜ್ ಹಾಗೂ ಹೆಚ್.ಎಂ.ಸಣ್ಣ ಗೌಡರು ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.

error: Content is protected !!