ಬಾಪೂಜಿ ಸಿಬಿಎಸ್‌ಇ ಶಾಲೆಯಲ್ಲಿ ಪದಸ್ಥಾಪನಾ ಸಮಾರಂಭ

ದಾವಣಗೆರೆ, ನ.3- ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪದಸ್ಥಾಪನಾ ಸಮಾರಂಭವನ್ನು ಆನ್‌ಲೈನ್ ಮೂಲಕ ಹಮ್ಮಿಕೊಳ್ಳಲಾಗಿತ್ತು. ಶಾಲಾ ಪ್ರಾಂಶುಪಾಲ ಸಮರೇಂದ್ರ ಪಾಣಿಗ್ರಹಿ ಹಾಗೂ ಶೈಕ್ಷಣಿಕ ಮಾರ್ಗದರ್ಶಕ ಸಿ. ಮಂಜಪ್ಪ ಉಪಸ್ಥಿತಿಯಲ್ಲಿ ಪಿ.ವಿ. ಪ್ರಭು ಅವರು ಸಮೂಹ ನಾಯಕತ್ವದ ವರದಿ ವಾಚಿಸಿದರು. ಶಾಲಾ ಮುಖ್ಯಸ್ಥ ಮಂಜುನಾಥ ರಂಗರಾಜು ಮಾತನಾಡಿದರು. ವಿನುತಾ ಮತ್ತು ನಿತ್ಯಶ್ರೀ ನೃತ್ಯ ಪ್ರಸ್ತುತ ಪಡಿಸಿದರು. ನಾಯಕ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.

ನರ್ಸರಿ ವಿಭಾಗದ ಮುಖ್ಯಸ್ಥೆ ಸುಮಂಗಲ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಎಲ್ಸಿ ಲೂಯಿಸ್ ಮತ್ತು ಸುಮ ಕುಲಕರ್ಣಿ  ಮತ್ತಿತರರು ಉಪಸ್ಥಿತರಿದ್ದರು. ಪ್ರೌಢಶಾಲಾ ಸಹ ಶಿಕ್ಷಕರಾದ ಎಂ. ವಾಸೀಂ ಪಾಷ ಸ್ವಾಗತಿಸಿದರು. ಎ.ವಿ. ವಿನಾಯಕ ವಂದಿಸಿದರು.

error: Content is protected !!