ಜಿಗಳಿಯಲ್ಲಿ ಕನ್ನಡ ರಾಜ್ಯೋತ್ಸವ

ಮಲೇಬೆನ್ನೂರು, ನ.1- ಜಿಗಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಗ್ರಾ.ಪಂ. ಕಚೇರಿಯಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು. ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಎಂ. ದೇವೇಂದ್ರಪ್ಪ, ಬಿ.ಕೆ. ಮಹೇಶ್ವರಪ್ಪ, ಎಂ.ವಿ. ನಾಗರಾಜ್, ಡಿ.ಎಂ. ಹರೀಶ್, ಕೆ.ಎಂ. ರಾಮಪ್ಪ, ನಿಟ್ಟುವಳ್ಳಿ ಕರಿಬಸಪ್ಪ, ಪಿಡಿಓ ದಾಸರ ರವಿ, ಗ್ರಾ.ಪಂ.ನ ಬಿ. ದಾನಪ್ಪ, ಬಿ. ಮೌನೇಶ್, ಶೇಖರನಾಯ್ಕ, ಮುತ್ತು, ಬಸವರಾಜಯ್ಯ, ರಂಗನಾಥ್, ಬಸವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ.ಹಿ.ಪ್ರಾ ಶಾಲೆಯಲ್ಲಿ 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭುವನೇಶ್ವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಶಿಕ್ಷಕ ಮಲ್ಲಿಕಾರ್ಜುನ್ ಅವರು ಕನ್ನಡ ನಾಡು, ನುಡಿ ಕುರಿತು ಮಾತನಾಡಿ, ನಂತರ ಗಂಧದ ಗುಡಿ ಚಲನಚಿತ್ರದ ಹಾಡು ಹಾಡಿ ಗಮನ ಸೆಳೆದರು.

ಎಸ್‌ಡಿಎಂಸಿ ಅಧ್ಯಕ್ಷ ಜಿ.ಆರ್. ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಕರಿಬಸಪ್ಪ, ಶಿಕ್ಷಕರಾದ ಶ್ರೀನಿವಾಸ್ ರೆಡ್ಡಿ, ಗುಡ್ಡಪ್ಪ, ಲೋಕೇಶ್, ಲಿಂಗರಾಜ್, ದೀಪಾ, ವೀಣಾ, ಕುಸುಮಾ ಪಾಲ್ಗೊಂಡಿದ್ದರು.

error: Content is protected !!