ಹರಪನಹಳ್ಳಿ, ಜು.28- ಚಾಲಕನ ನಿಯಂತ್ರಣ ತಪ್ಪಿ ಮೈಮೇಲೆ ಕಾರು ಹರಿದು ಪರಿಣಾಮ ಬಾಲಕ ಸ್ಥಳದಲ್ಲಿ ಯೇ ಸಾವನ್ನಪ್ಪಿದ ಘಟನೆ ಹರಪನಹಳ್ಳಿ ತಾಲ್ಲೂಕಿನ ತೆಲಿಗಿ ಗ್ರಾಮದಲ್ಲಿ ಮಂಗಳವಾರ ಜರುಗಿದೆ.
ಶಿವರಾಜ (9) ಸಾವನ್ನಪ್ಪಿದ ಬಾಲಕ. ಮೃತ ಬಾಲಕ ತಾತ ಮತ್ತು ಅಕ್ಕ ಒಟ್ಟು ಮೂವರು ಅಂಗನವಾಡಿ ಕೇಂದ್ರದಿಂದ ಅಕ್ಕಿ ತೆಗೆದುಕೊಂಡು ಮನೆಗೆ ಹೋಗುವಾಗ ಹರಪನಹಳ್ಳಿಯಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕಾರೊಂದು ಬಾಲಕನ ಮೈ ಮೇಲೆ ಹರಿದು ಹೋಗಿ ಮನೆಯೊಂದಕ್ಕೆ ನುಗ್ಗಿದೆ. ಆಗ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಶಿವಮೊಗ್ಗದ ಚಾಲಕ ರಾಘವೇಂದ್ರನನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ. ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.