ಹರಿಹರ : ರಸ್ತೆ ಅಪಘಾತದಲ್ಲಿ ಯುವತಿ ಸಾವು

ಹರಿಹರ, ಅ.28- ಹನಗವಾಡಿಯ ಕೋಮಲ (17) ಎಂಬ ಯುವತಿಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ರಾತ್ರಿ ನಡೆದಿದೆ.

ತಾಲ್ಲೂಕಿನ ಹನಗವಾಡಿ ಗ್ರಾಮದ ಹೊರ ವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಸರ್ವಿಸ್ ರಸ್ತೆಯಲ್ಲಿ ವಿರುದ್ಧವಾಗಿ ವೇಗವಾಗಿ  ಬಂದ ಲಾರಿಯು ಎದುರಿಗೆ ಬರುತ್ತಿದ್ದ ಬೈಕ್ ಸವಾರರಿಗೆ ಗುದ್ದಿದೆ. 

ಮೃತ ಯುವತಿಯು ಹನಗ ವಾಡಿ ಗ್ರಾಮದ ಬಸಪ್ಪ ಅವರ ಮಗಳು ಎಂದು ಗುರುತಿಸ ಲಾಗಿದ್ದು, ಉಳಿದ ಗಾಯಾಳು ವನ್ನು ಹರಿಹರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಪಿಎಸ್ಐ ಡಿ.ರವಿಕುಮಾರ್, ಸೈಫುದ್ದಿನ್ ಭೇಟಿ ನೀಡಿದ್ದರು.

error: Content is protected !!