ಮಲೇಬೆನ್ನೂರು, ಜು. 25- ಪಟ್ಟಣದ 5ನೇ ವಾರ್ಡ್ನಲ್ಲಿ ಟಾಸ್ಕ್ ಫೋರ್ಸ್ ಸಮಿತಿ ವತಿಯಿಂದ ಮನೆ ಮನೆಗೆ ತೆರಳಿ ಕರೊನಾ ವಿರುದ್ಧ ಜಾಗೃತಿ ಮೂಡಿಸಲಾಯಿತು.
ಪುರಸಭೆ ಮುಖ್ಯಾಧಿ ಕಾರಿ ಧರಣೇಂದ್ರಕುಮಾರ್, ವಾರ್ಡ್ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷೆ ಶಶಿಕಲಾ ಕೇಶವಾಚಾರ್, ಆರೋಗ್ಯಾಧಿಕಾರಿ ಗುರುಪ್ರಸಾದ್, ಪರಿಸರ ಇಂಜಿನಿಯರ್ ಉಮೇಶ್, ನಾಗರಿಕರಾದ ಪ್ರಕಾಶಚಾರ್, ಶಿವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಉಪ ತಹಶೀಲ್ದಾರ್ ರವಿ, ಕಂದಾಯ ನಿರೀಕ್ಷಕ ಸಮೀರ್ ಅವರು 20ನೇ ವಾರ್ಡ್ನಲ್ಲಿ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷೆ ಮಮ್ತಾಜ್ ಬೇಗಂ ಅವರ ಜೊತೆಯಲ್ಲಿ ಭಾಗವಹಿಸಿ ಕೋವಿಡ್ 19ರ ಬಗ್ಗೆ ಜನ ಜಾಗೃತಿ ಸಭೆ ನಡೆಸಿದರು. 8ನೇ ವಾರ್ಡ್ನಲ್ಲಿ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷೆ ಅಂಜಿನಮ್ಮ ವಿಜಯಕುಮಾರ್ ಮತ್ತು 11ನೇ ವಾರ್ಡ್ನಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಮಂಜುಳಾ ಭೋವಿಕುಮಾರ್, 1ನೇ ವಾರ್ಡ್ನಲ್ಲಿ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಲತೀಫ್ ಸಾಬ್ ಅವರ ನೇತೃತ್ವದಲ್ಲಿ ನೋಡಲ್ ಅಧಿಕಾರಿಗಳಾದ ಗಣೇಶ್, ಗುರುಪ್ರಸಾದ್, ದಿನಕರ್, ಉಮೇಶ್ ಅವರು ಕೊರೊನಾ ಬರದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಾರ್ಡ್ ಜನರಿಗೆ ತಿಳಿಸಿದರು.