ಹರಿಹರ ನಗರಸಭೆ ಜೆಡಿಎಸ್ ವಶ

ಅಧ್ಯಕ್ಷರಾಗಿ ರತ್ನ ಉಜ್ಜೇಶ್‌, ಉಪಾಧ್ಯಕ್ಷರಾಗಿ ಎಂ.ಎಸ್. ಬಾಬುಲಾಲ್

ಅಧಿಕೃತ ಘೋಷಣೆಗೆ ನ್ಯಾಯಾಲಯ ತಡೆ, ಆಯ್ಕೆಯಾದರೂ ಅಧಿಕಾರವಿಲ್ಲ

ಹರಿಹರ, ಅ.28- ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ  ಅಧ್ಯಕ್ಷ ರಾಗಿ ಜೆಡಿಎಸ್‌ನ ರತ್ನ ಡಿ. ಉಜ್ಜೇಶ್ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆ ಸ್‌ನ ಎಂ.ಎಸ್. ಬಾಬುಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ ಅಧಿಕೃತ ಘೋಷಣೆ ಮಾಡಲು ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ರಾಜ್ಯ ಸರ್ಕಾರದ ಮೀಸಲಾತಿ ಪಟ್ಟಿ ವಿರೋಧಿಸಿ ಸಲ್ಲಿಸಲಾದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಏಕ ಸದಸ್ಯ ಪೀಠ ತೀರ್ಪು ನೀಡುವವರೆಗೆ ಚುನಾವ ಣೆಯ ಫಲಿತಾಂಶ ಪ್ರಕಟಿಸಬಾರದು ಎಂದು ಚುನಾವಣಾ ಆಯೋಗ ದಿಂದ ಬಂದಿರುವ ನಿರ್ದೇಶನದಂತೆ ಇಂದು ನಡೆದ ಆಯ್ಕೆಯ ಫಲಿ ತಾಂಶದ ಅಧಿಕೃತ ಘೋಷಣೆಯನ್ನು ಮುಂದೂಡಲಾಯಿತು.

ಇದಕ್ಕೂ ಮುನ್ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ರತ್ನ ಡಿ. ಉಜ್ಜೇಶ್ ಹಾಗೂ ಬಾಬುಲಾಲ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಿಶ್ಚಿತವಾಯಿತು.ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಚುನಾವಣಾ ಪ್ರಕ್ರಿ ಯೆ ನಡೆಸಿದರು.  ಅಧಿಕೃತ ಘೋಷ ಣೆವರೆಗೆ ನಗರಸಭೆ ಆಡಳಿತಾಧಿಕಾರಿ ಯಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕಾರ್ಯ ನಿರ್ವಹಿಸಲಿದ್ದಾರೆ.

ಬಿಜೆಪಿ ಐವರು ಸದಸ್ಯರಾದ ಅಶ್ವಿನಿ ಕೆ.ಜಿ. ಕೃಷ್ಣ, ನೀತಾ ಮೇಹರ್ವಾಡೆ, ರಜನಿಕಾಂತ್, ವಿಜಯಕುಮಾರ್, ಹನುಮಂತಪ್ಪ ತಡವಾಗಿ ಆಗಮಿಸಿದರು. ಜೆಡಿಎಸ್ ಓರ್ವ ಸದಸ್ಯ ಮುಜಾಮಿಲ್ ಬಿಲ್ಲು ಆನಾರೋಗ್ಯದಿಂದ ಗೈರಾಗಿದ್ದರು. ಸಂಸದ ಜೆ.ಎಂ. ಸಿದ್ದೇಶ್ವರ್ ಮತ್ತು ಶಾಸಕ ಎಸ್.ರಾಮಪ್ಪ ಸಹ ಚುನಾವಣೆಗೆ ಆಗಮಿಸಲಿಲ್ಲ.

ನಗರಸಭೆ ಮುಂಭಾಗ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ಆಯ್ಕೆ ಘೋಷಣೆ ಆಗದೆ ಇರುವು ದರಿಂದ ಸಂಭ್ರಮಾಚರಣೆಗೆ ಅವಕಾಶ ಸಿಗಲಿಲ್ಲ.

ಚುನಾವಣಾ ಪ್ರಕ್ರಿಯೆ ನಂತರ ರತ್ನ ಡಿ ಉಜ್ಜೇಶ್ ಜೆಡಿಎಸ್ ಕಚೇರಿಗೆ ತೆರಳಿ ಮಾಜಿ ಶಾಸಕ ಹೆಚ್. ಎಸ್. ಶಿವವಶಂಕರ್ ರವರಿಗೆ ಕೃತಜ್ಞತೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಎಸ್ ಲಕ್ಷ್ಮೀ ಎಇಇ ಬಿರಾದಾರ, ಸದಸ್ಯರಾದ ಎ. ವಾಮನಮೂರ್ತಿ,  ಜಂಬಣ್ಣ ಗುತ್ತೂರು, ವಸಂತ್, ಶಂಕರ್ ಖಟಾವ್ಕರ್, ಕೆ.ಜಿ. ಸಿದ್ದೇಶ್,  ಉಷಾ ಮಂಜುನಾಥ್, ದಿನೇಶ್ ಬಾಬು, ದಾದಾ ಖಲಂದರ್, ನಿಂಬಕ್ಕ ಚಂದಾಪೂರ್, ಪಾರ್ವತಮ್ಮ, ಪಕ್ಕೀರಮ್ಮ ಕವಿತಾ ಮಾರುತಿ, ಮಹಾಬೂಬ್ ಬಾಷಾ, ಸುಮಿತ್ರ ಮರಿದೇವ್, ವಿರೂಪಾಕ್ಷ, ರತ್ನಮ್ಮ, ಹನುಮಂತಪ್ಪ ರಜನಿಕಾಂತ್, ವಿಜಯಕುಮಾರ್, ಅಶ್ವಿನಿ, ನೀತಾ, ಲಕ್ಷ್ಮೀ ಮಹೋನ್, ಜಮಾಲುದ್ದೀನ್, ರೇಷ್ಮಾಬಾನು, ಶಾಹಿನಾ ಬಾನು ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.

error: Content is protected !!