ಜಿಲ್ಲೆಯಲ್ಲಿ 3 ಸಾವು, 86 ಪಾಸಿಟಿವ್

ಜಿಲ್ಲೆಯಲ್ಲಿ 3 ಸಾವು, 86 ಪಾಸಿಟಿವ್ - Janathavaniದಾವಣಗೆರೆ, ಜು. 26 – ಜಿಲ್ಲೆಯಲ್ಲಿ ಭಾನುವಾರದಂದು 89 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಇದೇ ದಿನದಂದು 57 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 520ಕ್ಕೆ ತಲುಪಿದೆ.

ಇದುವರೆಗೆ ಜಿಲ್ಲೆಯಲ್ಲಿ 1,423 ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ. ಇವರಲ್ಲಿ 867 ಜನರು ಇದುವರೆಗೂ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಒಟ್ಟು 36 ಸಾವುಗಳು ಸಂಭವಿಸಿವೆ.

ದಾವಣಗೆರೆ ತಾಲ್ಲೂಕಿನಲ್ಲಿ 54 ಸೋಂಕುಗಳು ಕಾಣಸಿಕೊಂಡಿವೆ. ಹರಿಹರದಲ್ಲಿ 5, ಜಗಳೂರಿನಲ್ಲಿ 15, ಚನ್ನಗಿರಿಯಲ್ಲಿ 10, ಹೊನ್ನಾಳಿಯಲ್ಲಿ 4 ಹಾಗೂ ಅನ್ಯ ಜಿಲ್ಲೆಯ ಒಂದು ಪ್ರಕರಣ ಕಾಣಿಸಿಕೊಂಡಿದೆ. ಬಿಡುಗಡೆಯಾದವರಲ್ಲಿ ದಾವಣಗೆರೆ ತಾಲ್ಲೂಕಿನ 31, ಹರಿಹರದ 12, ಜಗಳೂರಿನ ಆರು, ಚನ್ನಗಿರಿಯ ಐದು, ಹೊನ್ನಾಳಿಯ ಒಂದು ಹಾಗೂ ಇತರೆ ಜಿಲ್ಲೆಗಳ ಎರಡು ಪ್ರಕರಣಗಳು ಸೇರಿವೆ.

ದಾವಣಗೆರೆಯ ಆಜಾದ್ ನಗರದ 21 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇವರು ಸಕ್ಕರೆ ಕಾಯಿಲೆಯ ಸಮಸ್ಯೆಯಿಂದಲೂ ಬಳಲುತ್ತಿದ್ದರು. ನರಸರಾಜ ಪೇಟೆಯ 64 ವರ್ಷದ ಪುರುಷ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇವರು ಸಕ್ಕರೆ ಕಾಯಿಲೆ, ರಕ್ತದೊತ್ತಡ ಹಾಗೂ ಹೃದಯ ರೋಗದಿಂದ ಬಳಲುತ್ತಿದ್ದರು. ಹರಿಹರ ತಾಲ್ಲೂಕು ಮಲೇಬೆನ್ನೂರಿನ 65 ವರ್ಷದ ಮಹಿಳೆ ಮೃತಪಟ್ಟಿದ್ದು, ಇವರೂ ಸಕ್ಕರೆ ಕಾಯಿಲೆ ಸಮಸ್ಯೆ ಹೊಂದಿದ್ದರು.

ದಾವಣಗೆರೆ ನಗರದ ಎಂ.ಸಿ.ಸಿ. ಬಿ ಬ್ಲಾಕ್‌ನ 72ರ ವೃದ್ಧ, ಚೌಕಿಪೇಟೆಯ 27 ಹಾಗೂ 54ರ ಮಹಿಳೆಯರು, ಅಶೋಕ ನಗರದ 27ರ ಮಹಿಳೆ, ಆಜಾದ್ ನಗರದ 30ರ ಪುರುಷ ಹಾಗೂ 22ರ ಮಹಿಳೆ, ರೈತರ ಬೀದಿಯ 48ರ ಮಹಿಳೆ, ಕೆ.ಬಿ. ಬಡಾವಣೆಯ 54ರ ಪುರುಷ,   ಭಗತ್ ಸಿಂಗ್ ನಗರದ 47ರ ಮಹಿಳೆ, ವಸಂತ ರಸ್ತೆಯ 65ರ ಪುರುಷ, ಮಲ್ಲಿಕಾರ್ಜುನ್ ಚೌಲ್ಟ್ರಿ ಹಿಂದಿನ 18ರ ಯುವತಿಗೆ ಸೋಂಕು ಬಂದಿದೆ.

ಬಸವರಾಜ ಪೇಟೆಯ 31ರ ಮಹಿಳೆ, ಜಾಲಿನಗರ 34ರ ಮಹಿಳೆ ಹಾಗೂ 46ರ ಪುರುಷ, 75 ಹಾಗೂ 85ರ ವೃದ್ಧರು, ಎನ್.ಆರ್. ಪೇಟೆಯ 50ರ ಪುರುಷ ದುಗ್ಗಮ್ಮನ ಪೇಟೆಯ 60ರ ಪುರುಷ, ತರಳಬಾಳು ಬಡಾವಣೆಯ 45 ಹಾಗೂ 47ರ ಪುರುಷರು ಮತ್ತು 38 ಹಾಗೂ 69ರ ಮಹಿಳೆಯರು, ಹೊಸ ಬಡಾವಣೆಯ 75ರ ವೃದ್ಧ, ಮಹಾಲಕ್ಷ್ಮಿ ಬಡಾವಣೆಯ 31ರ ಪುರುಷ, ಪಿ.ಜೆ. ಬಡಾವಣೆಯ 60ರ ಮಹಿಳೆಯರಲ್ಲಿ ಸೋಂಕಿರುವುದು ಪತ್ತೆಯಾಗಿದೆ.

ನಿಟುವಳ್ಳಿಯ 55ರ ಮಹಿಳೆ, ವಿದ್ಯಾನಗರದ 38 ಹಾಗೂ 60ರ ಮಹಿಳೆ, ಬೀಡಿ ಲೇಔಟ್‌ನ 44 ಹಾಗೂ 45ರ ಪುರುಷ, ಆಜಾದ್ ನಗರದ 48ರ ಮಹಿಳೆ ಹಾಗೂ 10ರ ಬಾಲಕಿ, ಅಶೋಕ ನಗರದ 24ರ ಪುರುಷ, ಶೇಖರಪ್ಪ ನಗರದ 22ರ ಪುರುಷ, ಪೊಲೀಸ್ ಬಡಾವಣೆಯ 34ರ ಮಹಿಳೆ, ಬಾಷಾನಗರದ 21ರ ಮಹಿಳೆ, ಸ್ವಾಮಿ ವಿವೇಕಾನಂದ ಬಡಾವಣೆಯ 43ರ ಪುರುಷ,  ಕೆ.ಎಸ್.ಆರ್.ಟಿ.ಸಿ.ಯ  36ರ ವರ್ಷದ ಪುರುಷ ಚಾಲಕನಲ್ಲಿ ಸೋಂಕು ಕಂಡು ಬಂದಿದೆ.

ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ 35, 41 ಹಾಗೂ 71ರ ಮಹಿಳೆಯರು, 22, 23, 24, 28, 44, 55ರ ಹಾಗೂ 32ರರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.

ದಾವಣಗೆರೆ ತಾಲ್ಲೂಕಿನ ಶಿರಮಗೊಂಡನಹಳ್ಳಿಯ 38ರ ಪುರುಷನಲ್ಲಿ ಸೋಂಕು ಕಂಡು ಬಂದಿದೆ.

ಹೊನ್ನಾಳಿಯ ಕೆ.ಎಸ್.ಆರ್.ಟಿ.ಸಿ. ಡಿಪೋದ 28ರ ಪುರುಷ ಹಾಗೂ ಹೊನ್ನಾಳಿ ತಾಲ್ಲೂಕು ಗೋಣಿಗೆರೆಯ 29ರ ಪುರುಷ, ನ್ಯಾಮತಿಯ 42ರ ಮಹಿಳೆ, ದುರ್ಗಿಗುಡಿಯ 28ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.

ಜಗಳೂರಿನ 75ರ ವೃದ್ಧ, 20ರ ಪುರುಷ, ಇಲ್ಲಿನ ಪಾಪಲಿಂಗೇಶ್ವರ ಬಡಾವಣೆಯ 58ರ ಮಹಿಳೆ, ಸೂರ್ಯ ನಾರಾಯಣ ಬಡಾವಣೆಯ 60ರ ಪುರುಷ, ಹನುಮಂತಾಪುರದ 19ರ ಪುರುಷ, ಕೃಷ್ಣ ಬಡಾವಣೆಯ 10ರ ಬಾಲಕನಲ್ಲಿ ಸೋಂಕು ಕಂಡು ಬಂದಿದೆ.

ಜಗಳೂರು ತಾಲ್ಲೂಕಿನ ಬಿಳಿಚೋಡಿನ 4ರ ಬಾಲಕ, 25ರ ಮಹಿಳೆ, 14ರ ಬಾಲಕಿ, 10ರ ಬಾಲಕ, ದಿದ್ದಿಗಿಯ 50ರ ಪುರುಷ, ಮುಷ್ಟೂರಿನ 11ರ ಬಾಲಕ, ಗೊಲ್ಲರಹಟ್ಟಿಯ 55ರ ಪುರುಷ, ಚಿಕ್ಕಬನ್ನಹಟ್ಟಿಯ 65ರ ಪುರುಷ ಪತ್ತೆಯಾಗಿದೆ.

ಹರಿಹರದ 39ರ ಪುರುಷ, ಹಳ್ಳದಕೇರಿಯ 60ರ ಪುರುಷ, 80ರ ವೃದ್ಧ ಹಾಗೂ  ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ ಬಸವೇಶ್ವರ ಬಡಾವಣೆಯ 45ರ ಪುರುಷ ಹಾಗೂ 20ರ ಮಹಿಳೆ, ಹಿಂಡಸಘಟ್ಟದ 43ರ ಪುರುಷನಲ್ಲಿ ಸೋಂಕು ಕಂಡು ಬಂದಿದೆ.

ಚನ್ನಗಿರಿ ನಗರದ 71ರ ವೃದ್ಧ ಮತ್ತು ಚನ್ನಗಿರಿ ತಾಲ್ಲೂಕಿನ ನಲ್ಲೂರಿನ 40ರ ಮಹಿಳೆ, 50ರ ಪುರುಷ,  11ರ ಬಾಲಕ, ಕೊರಟಗೆರೆಯ 31ರ ಪುರುಷ, ಲಿಂಗದಹಳ್ಳಿಯ 37ರ ಪುರುಷ, ಹರಸಾಗರದ 65ರ ಪುರುಷನಲ್ಲಿ ಸೋಂಕು ಕಂಡು ಬಂದಿದೆ.

ರಾಣೇಬೆನ್ನೂರಿನ 30ರ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.

ಬಿಡುಗಡೆಯಾದವರಲ್ಲಿ ದಾವಣಗೆರೆ ನಗರದ ಸಿದ್ದವೀರಪ್ಪ ಬಡಾವಣೆಯ 64ರ ಪುರುಷ, ಶಾಂತಿನಗರದ 45ರ ಮಹಿಳೆ, ಕುವೆಂಪು ನಗರದ 55 ಹಾಗೂ 58ರ ಪುರುಷರು, ಜವಳಿ ಅಂಗಡಿಯೊಂದರ 39ರ ಪುರುಷ, ಬೇತೂರು ರಸ್ತೆಯ 50ರ ಪುರುಷ, ಬಿ.ಟಿ. ಕಾಂಪೌಂಡ್‌ನ 48ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್‌ನ 42 ಹಾಗೂ 66ರ ಪುರುಷರು ಹಾಗೂ 55ರ ಮಹಿಳೆ ಸೇರಿದ್ದಾರೆ.

ಆಂಜನೇಯ ಬಡಾವಣೆಯ 19, 22, 28, 61 ಹಾಗೂ 55ರ ಪುರುಷರು ಹಾಗೂ ಇದೇ ಬಡಾವಣೆಯ 48 ಹಾಗೂ 58ರ ಮಹಿಳೆಯರು,  ಕೆ.ಟಿ.ಜೆ. ನಗರದ 32 ಹಾಗೂ 33ರ ಮಹಿಳೆಯರು, ಇ.ಡಬ್ಲ್ಯೂ.ಎಸ್. ಕಾಲೊನಿಯ 39ರ ಪುರುಷ , ನಿಟುವಳ್ಳಿಯ 55ರ ಪುರುಷ, ಪಿ.ಜೆ. ಬಡಾವಣೆಯ 40ರ ಪುರುಷ, ಕೊಟ್ಟೂರೇಶ್ವರ ಬಡಾವಣೆಯ 39ರ ಪುರುಷ, ಆನೆಕೊಂಡದ 51ರ ಪುರುಷ, ಭಗತ್ ಸಿಂಗ್ ನಗರದ 33ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್‌ನ 40ರ ಪುರುಷ, ರಾಜ್ ರೆಸಿಡೆನ್ಸಿಯ 30ರ ಪುರುಷ, ಅಮರಪ್ಪನ ತೋಟದ 49ರ ಪುರುಷ,  ದಾವಣಗೆರೆ ವಿಶ್ವವಿದ್ಯಾನಿಲಯದ 48ರ  ಮಹಿಳೆ ಬಿಡುಗಡೆಯಾಗಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ರಾಂಪುರದ 32ರ ಪುರುಷ ಬಿಡುಗಡೆಯಾಗಿದ್ದಾರೆ.

ಹರಿಹರದ ಜೆ.ಸಿ. ಬಡಾವಣೆಯ 63ರ ಮಹಿಳೆ, 21ರ ಮಹಿಳೆ, ಚಿನ್ನಪ್ಪ ಕಾಂಪೌಂಡ್‌ನ 20 ಹಾಗೂ 53ರ ಪುರುಷರು, ಕೆ.ಎಸ್.ಆರ್.ಟಿ.ಸಿ. ಡಿಪೋದ 39ರ ಪುರುಷ ಹಾಗೂ 48ರ ಮಹಿಳೆ, ಕೇಶವನಗರದ 25ರ ಮಹಿಳೆ ಹಾಗೂ ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ 38ರ ಮಹಿಳೆ, ಹೊಳೆಸಿರಿಗೆರೆಯ 47ರ ಪುರುಷ, ರಾಮತೀರ್ಥದ 50ರ ಮಹಿಳೆ ಬಿಡುಗಡೆಯಾಗಿದ್ದಾರೆ.

ಚನ್ನಗಿರಿಯ ರಂಗನಾಥ ಬಡಾವಣೆಯ 29ರ ಪುರುಷ ಹಾಗೂ ಚನ್ನಗಿರಿ ತಾಲ್ಲೂಕು ಕೆರೆ ಬಿಳಚಿಯ 52ರ ಪುರುಷ, ಸಂತೇಬೆನ್ನೂರಿನ 43ರ ಪುರುಷ ತಣಿಗೆರೆಯ 35ರ ಪುರುಷ ಗುಣವಾಗಿದ್ದಾರೆ.

ಜಗಳೂರಿನ ಇಂದಿರಾ ನಗರದ 58ರ ಪುರುಷ,  ಎನ್.ಎಂ. ರಸ್ತೆಯ 52ರ ಪುರುಷ, ಎನ್.ಜಿ.ಒ. ಕಾಲೋನಿಯ 72ರ ವೃದ್ಧ ಹಾಗೂ ಜಗಳೂರು ತಾಲ್ಲೂಕಿನ ಗುತ್ತಿದುರ್ಗದ 49ರ ಪುರುಷ, ಕೊರಟಿಕೆರೆಯ 20ರ ಪುರುಷ, ಚಿಕ್ಕ ಉಜ್ಜಿನಿಯ 28ರ ಪುರುಷ ಗುಣವಾಗಿ ಬಿಡುಗಡೆಯಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕಮ್ಮತ್ತಹಳ್ಳಿಯ 35ರ ಮಹಿಳೆ ಹಾಗೂ ಹುಬ್ಬಳ್ಳಿಯ 41ರ ಪುರುಷ, ಬೆಂಗಳೂರಿನ 52ರ ಪುರುಷ ಗುಣವಾಗಿದ್ದಾರೆ.

error: Content is protected !!