ಮಾಜಿ ಸಚಿವ ಡಾ. ನಾಗಪ್ಪ ನಿಧನ

ಹರಿಹರ, ಅ.27 – ಅಜಾತ ಶತ್ರು, ಹಿರಿಯ ರಾಜಕಾರಣಿ, ದಕ್ಷ ಆಡಳಿತಗಾರರು, ಶಿಕ್ಷಣ ಪ್ರೇಮಿಗಳಾದ ಮಾಜಿ ಸಚಿವ ಡಾ. ವೈ ನಾಗಪ್ಪ (87)  ಅವರು ಮಂಗಳವಾರ ಬೆಳಗ್ಗೆ 8 ಗಂಟೆಗೆ ನಗರದ ಶಿವಮೊಗ್ಗ ರಸ್ತೆಯ ಶ್ರೇಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆಯನ್ನು ಸಂಜೆ ಹರಿಹರದಲ್ಲಿರುವ ತುಂಗಭದ್ರಾ ನದಿಯ ತಟದಲ್ಲಿರುವ ಅವರ ಜಮೀನಿನಲ್ಲಿ ನೆರವೇರಿಸಲಾಯಿತು.

ಕಳೆದ ಹಲವು ದಿನಗಳಿಂದ ಅನಾ ರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. 

ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ 1989, 1999 ಹಾಗೂ 2004 ಸೇರಿದಂತೆ ಒಟ್ಟು ಮೂರು ಬಾರಿ ಶಾಸಕರಾಗಿ, 2004 ರಲ್ಲಿ   ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದ ಧರ್ಮಸಿಂಗ್ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದರು. 

2008 ರಲ್ಲಿ ಮತ್ತೆ ಹರಿಹರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ದರಾದರೂ, ಅವರಿಗೆ ಕಹಿ ಸೋಲು ಎದುರಾಗಿತ್ತು. ನಂತರ ಬದ ಲಾದ ರಾಜಕೀಯ ಮತ್ತು ಅನಾರೋಗ್ಯ ದಿಂದ ಅವರು ರಾಜಕಾರಣದ ತೆರೆಮರೆಗೆ ಸರಿದಿದ್ದರು.

ಹರಿಹರ ತಾಲ್ಲೂಕಿನಲ್ಲಿ ಶೋಷಿತ ಜನಾಂಗಗಳ ನಾಯಕರಾಗಿ ಧ್ವನಿಯಾಗಿದ್ದ ನಾಗಪ್ಪ, ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕ. 1980 ರಲ್ಲಿ ಹರಿಹರ ತಾಲ್ಲೂಕು ಆಸ್ಪತ್ರೆಯಲ್ಲಿ ಅವರು ವೈದ್ಯರಾಗಿದ್ದ ಸಮಯದಲ್ಲಿ ರಾಜಕಾರಣಿಯೊಬ್ಬರ ಜೊತೆ ನಡೆದ ವಿವಾದ, ಅವರು ರಾಜಕೀಯಕ್ಕೆ ಬರಲು ಕಾರಣವಾಯಿತು. ಹರಿಹರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ದ್ದಲ್ಲದೇ  ಗೆದ್ದು ಸಚಿವರೂ ಆದರು. 

ಮೃತರು ಪತ್ನಿ ಜಯದೇವಿ, ಪುತ್ರ ವೈ.ಎನ್. ಮಹೇಶ್, ಹೆಣ್ಣು ಮಕ್ಕಳಾದ ಸವಿತ, ಸುನಿತ, ಡಾ. ರಶ್ಮಿ, ಅಳಿಯ ಸುರೇಶ್ ಹಾದಿಮನಿ, ಇನ್ನಿಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ಕಾಗಿನಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಮಹಾಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮೀಜಿ ಅಂತಿಮ ದರ್ಶನ ಪಡೆದಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ,  ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಬಿ. ಕೋಳಿವಾಡ, ಶಾಸಕರಾದ ಎಸ್. ರಾಮಪ್ಪ, ಎಸ್. ಎ. ರವೀಂದ್ರನಾಥ್, ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್, ಬಿ.ಪಿ. ಹರೀಶ್, ಎಂ.ಎಲ್.ಸಿ. ನಾರಾಯಣ ಸ್ವಾಮಿ,  ಮಾಜಿ ಎಂ.ಎಲ್.ಸಿ. ಡಾ. ಎ.ಹೆಚ್. ಶಿವಯೋಗಿ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಂಜಪ್ಪ, ಮುಖಂಡರಾದ ಎನ್.ಜಿ. ಪುಟ್ಟಸ್ವಾಮಿ, ಹೆಚ್.ಕೆ. ರಾಮಚಂದ್ರಪ್ಪ,  ಪೌರಾಯುಕ್ತೆ ಎಸ್ ಲಕ್ಷ್ಮಿ, ತಹಶೀಲ್ದಾರ್ ಕೆ ರಾಮಚಂದ್ರಪ್ಪ, ಜಿ.ಪಂ. ಸದಸ್ಯ ಬಸವಂತಪ್ಪ, ಜಿಪಂ ಮಾಜಿ ಸದಸ್ಯರಾದ ಹಾಲೇಶಪ್ಪ ಬೆಣ್ಣೆಹಳ್ಳಿ,  ನಾಗೇಂದ್ರಪ್ಪ, ದಿನೇಶ್ ಶೆಟ್ಟಿ, ಮುದೇಗೌಡ್ರು ಗಿರೀಶ್, ದ್ಯಾಮಪ್ಪ ಕೊಕ್ಕನೂರು, ದೇವೆಂದ್ರಪ್ಪ ಕುಣೆಬೆಳಕೆರೆ, ಕೆ.ಬಿ. ಬಸವರಾಜಪ್ಪ, ಮುರುಗೇಶಪ್ಪ, ಶಂಕರ್‌ ಖಟಾವ್ಕರ್, ಹಿಂಡಸಗಟ್ಟ ಪರಮೇಶ್ವರಪ್ಪ, ಮಂಜುನಾಥ್ ಪಾಟೀಲ್, ಸುರೇಶ್ ಚಂದಪೂರ್, ಆನಂದಪ್ಪ ಜಿಗಳಿ, ಬಿ. ರೇವಣಸಿದ್ದಪ್ಪ, ಕೆ. ಜಡಿಯಪ್ಪ, ಹುಲಗೇಶ್ ಮತ್ತಿತರೆ ಮುಖಂಡರು ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.

error: Content is protected !!