ಹರಪನಹಳ್ಳಿ, ಜು.23- ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಳಿವಿನ ಅಂಚಿನಲ್ಲಿರುವ ಉಡವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಪ್ರಸಂಗ ಇಂದು ಪಟ್ಟಣದಲ್ಲಿ ಜರುಗಿದೆ.
ಪಟ್ಟಣದ ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ಸಿ.ಚಂದ್ರಶೇಖರ್ ಭಟ್ ಅವರ ಮನೆಯಲ್ಲಿ ದಿಢೀರನೇ ಪ್ರತ್ಯಕ್ಷವಾಗಿದ್ದ ಉಡವನ್ನು ಕಂಡು ಹಾವು ಎಂದು ಭಾವಿಸಿ, ಆತಂಕದಿಂದ ಹಾವು ಹಿಡಿಯುವವರನ್ನು ಕರೆಹಿಸಿದಾಗ ಅದು ಹಾವಲ್ಲ ಉಡ ಎಂದು ತಿಳಿದು, ಅದನ್ನು ರಕ್ಷಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದರು.
ವಲಯ ಅರಣ್ಯ ಅಧಿಕಾರಿ ಭರತ್ ಡಿ.ತಳವಾರ ಅವರ ಸೂಚನೆಯ ಮೇರೆಗೆ ಅವರ ಸಿಬ್ಬಂದಿಗಳು ಜಿಟ್ಟನಕಟ್ಟೆಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಉಡವನ್ನು ಸುರಕ್ಷಿತವಾಗಿ ಬಿಡಲಾಯಿತು.
ಈ ವೇಳೆ ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ, ವಕೀಲ ಸಿ.ರಾಮ್‌ಭಟ್, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ರಮೇಶ್ ರಾಥೋಡ್, ಜೆ.ಅಶೋಕ್, ಮಂಜ್ಯಾನಾಯ್ಕ್, ಹೆಚ್.ಶಿವಕುಮಾರ್, ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.