ಶತಕ ದಾಟಿದ ‘ಕೊರೊನಾ’

107 ಪಾಸಿಟಿವ್, ಸಕ್ರಿಯ ಸೋಂಕಿತರ ಸಂಖ್ಯೆ 479

ದಾವಣಗೆರೆ, ಜು. 23 – ಜಿಲ್ಲೆ ಯಲ್ಲಿ ಒಂದೇ ದಿನ 107 ಕೊರೊನಾ ಪ್ರಕರಣ ಗಳು ಕಾಣಿಸಿಕೊಂಡಿವೆ. ನೂರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿ ಕೊಂಡಿರುವುದು ಇದೇ ಮೊದಲು. ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 479ಕ್ಕೆ ಏರಿಕೆಯಾಗಿದೆ.

ಇದೇ ದಿನದಂದು 26 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೂ ಬಿಡುಗಡೆಯಾದವರ ಸಂಖ್ಯೆ 667ಕ್ಕೆ ತಲುಪಿದೆ. ಇಬ್ಬರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 32ಕ್ಕೆ ತಲುಪಿದೆ.

ದಾವಣಗೆರೆಯ ಮದೀನಾ ಆಟೋ ಸ್ಟ್ಯಾಂಡ್ ಬಳಿಯ ನಿವಾಸಿ 68 ವರ್ಷದ ವ್ಯಕ್ತಿ ನಿಧನರಾಗಿದ್ದು, ಅವರು ರಕ್ತದೊ ತ್ತಡ, ಸಕ್ಕರೆ ಕಾಯಿಲೆ ಮತ್ತಿತರೆ ಸಮಸ್ಯೆಗಳಿಂದಲೂ ಬಳಲುತ್ತಿದ್ದರು. ಸೇವಾದಳ ಕ್ವಾರ್ಟರ್ಸ್‌ನ ನಿವಾಸಿ ಯಾದ 55 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು ಇವರೂ ಸಹ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದ ಸಮಸ್ಯೆಗಳಿಂದ ಬಳಲುತ್ತಿದ್ದರು.

ಗುರುವಾರದಂದು ಪತ್ತೆಯಾದ ಸೋಂಕುಗಳಲ್ಲಿ ದಾವಣಗೆರೆ ತಾಲ್ಲೂ ಕಿನ 64, ಹರಿಹರದ 25, ಜಗಳೂರಿನ 6, ಚನ್ನಗಿರಿಯ 1, ಹೊನ್ನಾಳಿಯ ಎರಡು ಹಾಗೂ ಇತರೆ ಜಿಲ್ಲೆಗಳ ಎಂಟು ಪ್ರಕರಣಗಳು ಸೇರಿವೆ.

ದಾವಣಗೆರೆ ತಾಲ್ಲೂಕಿನ 13, ಹರಿಹರದ 10, ಜಗಳೂರು, ಹೊನ್ನಾಳಿ ಹಾಗೂ ಇತರೆ ಜಿಲ್ಲೆಯ ತಲಾ ಒಬ್ಬರು ಗುಣಮುಖರಾಗಿ ಬಿಡುಗಡೆಯಾಗಿ ದ್ದಾರೆ.ದಾವಣಗೆರೆಯ ಬಸವರಾಜಪೇಟೆಯ 36 ವರ್ಷದ ವ್ಯಕ್ತಿ, ಶಿವನಗರದ 8 ವರ್ಷದ ಬಾಲಕಿ, ದೇವರಾಜ ಅರಸ್ ಬಡಾವಣೆಯ 43 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಆಂಜನೇಯ ಬಡಾವಣೆಯ 29 ವರ್ಷದ ಮಹಿಳೆ, ತರಳಬಾಳು ಬಡಾವಣೆಯ 82 ವರ್ಷದ ವೃದ್ಧ, ಹೊಂಡದ ವೃತ್ತದ 44 ವರ್ಷದ ವ್ಯಕ್ತಿ, ಆಂಜನೇಯ ಬಡಾವಣೆಯ 30 ವರ್ಷದ ವ್ಯಕ್ತಿ, ಬೆಳ್ಳೂಡಿ ಗಲ್ಲಿಯ 39 ವರ್ಷದ ವ್ಯಕ್ತಿ, ಕೆ.ಟಿ.ಜೆ. ನಗರದ 32 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.

ಜಾಲಿನಗರದ 64 ವರ್ಷದ ವ್ಯಕ್ತಿ, ಯಲ್ಲಮ್ಮ ನಗರದ 27 ವರ್ಷದ ಮಹಿಳೆ, ಹುಬ್ಬಳ್ಳಿ ಚೌಡಪ್ಪನ ಗಲ್ಲಿಯ 43 ವರ್ಷದ ವ್ಯಕ್ತಿ, ರಾಜ್ ರೆಸಿಡೆನ್ಸಿಯ 30 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.

ಆಂಜನೇಯ ಬಡಾವಣೆಯ 28 ವರ್ಷದ ವ್ಯಕ್ತಿ ಹಾಗೂ 48 ಮತ್ತು 58 ವರ್ಷದ ಮಹಿಳೆಯರು, ಅಮರಪ್ಪನ ತೋಟದ 49 ವರ್ಷದ ವ್ಯಕ್ತಿ, ಶಿವಾಜಿ ನಗರದ 38 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ.

ಯರಗುಂಟೆಯ 39 ವರ್ಷದ ವ್ಯಕ್ತಿ, ವಿದ್ಯಾನಗರದ 70 ವರ್ಷದ ವೃದ್ಧೆ, ಯಾತ್ರಿ ನಿವಾಸದಲ್ಲಿದ್ದ 47, 37 ಹಾಗೂ 27 ವರ್ಷದ ವ್ಯಕ್ತಿಗಳು ಹಾಗೂ 33 ಮತ್ತು 25 ವರ್ಷದ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.

ಲೆನಿನ್ ನಗರದ 62 ವರ್ಷದ ವ್ಯಕ್ತಿ,  ಶಂಕರ್ ವಿಹಾರ ಬಡಾವಣೆಯ 27 ವರ್ಷದ ವ್ಯಕ್ತಿ, ದೇವರಾಜ ಅರಸ್ ಬಡಾವಣೆಯ 62 ವರ್ಷದ ವೃದ್ಧ, ಜಯನಗರದ 29 ವರ್ಷದ ವ್ಯಕ್ತಿ, ಬಂಬೂ ಬಜಾರ್‌ನ 28 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಕಂಡು ಬಂದಿದೆ.

ಚಿಗಟೇರಿ ಆಸ್ಪತ್ರೆಯ 40 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಮಹಾಲಕ್ಷ್ಮಿ ಲೇಔಟ್‌ನ 43 ವರ್ಷದ ವ್ಯಕ್ತಿ, ಸರಸ್ವತಿ ನಗರದ 44 ವರ್ಷದ ವ್ಯಕ್ತಿ, ಕೆ.ಬಿ. ಬಡಾವಣೆಯ 63 ವರ್ಷದ ವೃದ್ಧ, ಕೆ.ಟಿ.ಜೆ. ನಗರದ 60 ವರ್ಷದ ವೃದ್ಧ, ಪಿ.ಜೆ. ಬಡಾವಣೆಯ 49 ವರ್ಷದ ವ್ಯಕ್ತಿ, ಸರಸ್ವತಿ ನಗರದ 65 ವರ್ಷದ ವೃದ್ಧೆ, ನಿಟುವಳ್ಳಿಯ 55 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.

ಜಾಲಿನಗರದ 51 ವರ್ಷದ ವ್ಯಕ್ತಿ, ನ್ಯೂ ಬಂಬೂ ಬಜಾರ್‌ನ 44 ವರ್ಷದ ವ್ಯಕ್ತಿ, ಆಜಾದ್ ನಗರದ 21 ವರ್ಷದ ವ್ಯಕ್ತಿ, ವಿನೋಬನಗರದ 25 ವರ್ಷದ ವ್ಯಕ್ತಿ, ಎಂಸಿಸಿ ಎ ಬ್ಲಾಕ್‌ನ 57 ವರ್ಷದ ಮಹಿಳೆ, ಬಾಷಾ ನಗರದ 50 ವರ್ಷದ ಮಹಿಳೆ, ದೀಕ್ಷಿತ್ ರಸ್ತೆಯ 27 ವರ್ಷದ ಮಹಿಳೆ, ಸಿದ್ದವೀರಪ್ಪ ಬಡಾವಣೆಯ 30 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.

ಎಂಸಿಸಿ ಎ ಬ್ಲಾಕ್‌ನ 60 ವರ್ಷದ ವ್ಯಕ್ತಿ, ಕೆ.ಟಿ.ಜೆ. ನಗರದ  42 ವರ್ಷದ ವ್ಯಕ್ತಿ, ಕೊಟ್ಟೂರೇಶ್ವರ ಬಡಾವಣೆಯ 65 ವರ್ಷದ ವ್ಯಕ್ತಿ, ಹೊಂಡದ ವೃತ್ತದ 65 ವರ್ಷದ ವೃದ್ಧ, ಕೆ.ಎಸ್.ಆರ್.ಟಿ.ಸಿ.ಯ 34 ವರ್ಷದ ಸಿಬ್ಬಂದಿ, ನರಸರಾಜಪೇಟೆಯ 39 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.

ದಾವಣಗೆರೆ ತಾಲ್ಲೂಕಿನ ಅತ್ತಿಗೆರೆಯ 41 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ.

ಜಗಳೂರಿನ ಜಾಮಿಯಾ ಮಸೀದಿಯ ಸರ್ಕಾರಿ ಉರ್ದು ಶಾಲೆಯ ಸಮೀಪದ 35 ಹಾಗೂ 40 ವರ್ಷದ ವ್ಯಕ್ತಿಗಳು ಹಾಗೂ 32 ವರ್ಷದ ಮಹಿಳೆ, 60 ವರ್ಷದ ವೃದ್ಧೆ, ಇಂದಿರಾ ಬಡಾವಣೆಯ 58 ವರ್ಷದ ವ್ಯಕ್ತಿಗಳಲ್ಲಿ ಸೋಂಕಿರುವುದು ಪತ್ತೆಯಾಗಿದೆ.

ಜಗಳೂರು ತಾಲ್ಲೂಕಿನ ಗುತ್ತಿಗುರ್ಗದಲ್ಲಿ 49 ವರ್ಷದ ವ್ಯಕ್ತಿ, ಕೊರಟಿಕೆರೆಯ 20 ವರ್ಷದ ವ್ಯಕ್ತಿ, ದೊಣೆಹಳ್ಲಿಯ 31 ವ್ಯಕ್ತಿಗಳಲ್ಲಿ ಸೋಂಕು ಕಂಡು ಬಂದಿದೆ.

ಹೊನ್ನಾಳಿಯ ಅರಕೆರೆ ಕಾಲೋನಿಯ 42 ವರ್ಷದ ಮಹಿಳೆ, ಹೊನ್ನಾಳಿ ತಾಲ್ಲೂಕಿನ ಪಾಲವ್ವನಹಳ್ಳಿಯ  21 ವರ್ಷದ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.

ಹರಿಹರ ನಗರದ ಮರಾಠಗಲ್ಲಿಯ 44 ವರ್ಷದ ವ್ಯಕ್ತಿ, ಪ್ರಶಾಂತ ನಗರದ 47 ವರ್ಷದ ವ್ಯಕ್ತಿ, ಹವಳದ ಬೀದಿಯ 51 ವರ್ಷದ ಮಹಿಳೆ, ನಗರದ 17 ವರ್ಷದ ವ್ಯಕ್ತಿ,   ವಿದ್ಯಾನಗರ ಬಿ ಬ್ಲಾಕ್‌ನ 30 ವರ್ಷದ ಮಹಿಳೆ, ಮಜ್ಜಿಗಿ ಲೇಔಟ್‌ನ ನಾಲ್ಕು ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ.

ವಿದ್ಯಾನಗರದ 50 ವರ್ಷದ ವ್ಯಕ್ತಿ, ಭರತ್ ಕಾಂಪೌಂಡ್‌ನ 23 ವರ್ಷದ ಮಹಿಳೆ, ಶಾಮನೂರಿನ 39 ವರ್ಷದ ವ್ಯಕ್ತಿ, ರಾಮನಗರ ಮುಖ್ಯರಸ್ತೆಯ 42 ವರ್ಷದ ಮಹಿಳೆ, ಖಾಸಗಿ ದಂತ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯಾದ 48 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.

ಹರಿಹರ ನಗರದಲ್ಲಿ 6 ವರ್ಷದ ಬಾಲಕ, ನೀಲಕಂಠ ನಗರದ 42 ವರ್ಷದ ವ್ಯಕ್ತಿ, 25 ವರ್ಷದ ಮಹಿಳೆ, ಕಾಳಿದಾಸ ನಗರದ 34 ಹಾಗೂ 47 ವರ್ಷದ ವ್ಯಕ್ತಿಗಳು, ಹೆಚ್.ಎಸ್. ಬಡಾವಣೆಯ 28 ವರ್ಷದ ವ್ಯಕ್ತಿ, ಜೆ.ಸಿ. ಬಡಾವಣೆಯ 33 ವರ್ಷದ ಮಹಿಳೆ,  ಕೆ.ಎಸ್.ಆರ್.ಟಿ.ಸಿ. ಡಿಪೋದ 43 ವರ್ಷದ ವ್ಯಕ್ತಿ, ಬೆಂಕಿ ನಗರದ 45 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ 25 ವರ್ಷದ ವ್ಯಕ್ತಿ ಹಾಗೂ ಟಿಪ್ಪು ನಗರದ 55 ವರ್ಷದ ವ್ಯಕ್ತಿ, ಇಂದಿರಾ ನಗರದ 17 ವರ್ಷದ ಯುವಕ, 23 ಹಾಗೂ 24 ವರ್ಷದ ವ್ಯಕ್ತಿಗಳು ಮತ್ತು 60 ಹಾಗೂ 44 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.

ಚನ್ನಗಿರಿ ತಾಲ್ಲೂಕಿನ ಕೊಂಡದಹಳ್ಳಿಯ 21 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಹರಪನಹಳ್ಳಿಯ 7ನೇ ವಾರ್ಡ್‌ನಲ್ಲಿ 30 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹರಪನಹಳ್ಳಿ ತಾಲ್ಲೂಕಿನ ತೌಡೂರಿನ 24 ವರ್ಷದ ಮಹಿಳೆ, ಬೇವಿನಹಳ್ಳಿ ದೊಡ್ಡ ತಾಂಡಾದ 65 ವರ್ಷದ ವೃದ್ಧ, ಕಂಚಿಕೆರೆಯ 60 ವರ್ಷದ ವೃದ್ಧರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಚಿಕ್ಕಬಳ್ಳಾಪುರದ ಗುಡಿಬಂಡೆಯ ಎರಡು ವರ್ಷದ ಹೆಣ್ಣು ಮಗು ಹಾಗೂ 25 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ 39 ವರ್ಷದ ವ್ಯಕ್ತಿ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹಿರೆಎಮ್ಮಿಗನೂರಿನ 30 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಕಂಡು ಬಂದಿದೆ. 

ಇದೇ ದಿನದಂದು 26 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವರಲ್ಲಿ ದಾವಣಗೆರೆಯ 40 ವರ್ಷದ ವ್ಯಕ್ತಿ, ಎಂಸಿಸಿ ಎ ಬ್ಲಾಕ್‌ನ 12 ವರ್ಷದ ಮಹಿಳೆ, ಆಂಜನೇಯ ಬಡಾವಣೆಯ 56 ವರ್ಷದ ಮಹಿಳೆ, ಗಾಂಧಿನಗರದ 35 ವರ್ಷದ ಮಹಿಳೆ, ಜಯನಗರ ಬಿ ಬ್ಲಾಕ್‌ನ 34 ಹಾಗೂ 65 ವರ್ಷದ ಮಹಿಳೆಯರು, ಆಜಾದ್ ನಗರದ 13 ವರ್ಷದ ಬಾಲಕಿ, ಕುವೆಂಪು ನಗರದ 25 ವರ್ಷದ ವ್ಯಕ್ತಿ, ಆಜಾದ್ ನಗರದ 21 ವರಷದ ವ್ಯಕ್ತಿ, ಭಾರತ್ ಕಾಲೋನಿಯ 37 ವರ್ಷದ ವ್ಯಕ್ತಿ, ಎಸ್.ಪಿ.ಎಸ್. ನಗರದ 33 ವರ್ಷದ ವ್ಯಕ್ತಿಗಳು ಸೇರಿದ್ದಾರೆ.

ದಾವಣಗೆರೆ ತಾಲ್ಲೂಕು ಆರನೇಕಲ್ಲಿನ 17 ವರ್ಷದ ಯುವಕ ಗುಣವಾಗಿ ಬಿಡುಗಡೆಯಾಗಿದ್ದಾರೆ.

ಜಗಳೂರು ತಾಲ್ಲೂಕಿನ ತೋರಣಗಟ್ಟೆಯ 70 ವರ್ಷದ ವೃದ್ಧ ಹಾಗೂ ಹೊನ್ನಾಳಿ ತಾಲ್ಲೂಕಿನ ಹುಣಸಘಟ್ಟದ 60 ವರ್ಷದ ಮಹಿಳೆ ಗುಣ ಹೊಂದಿದ್ದಾರೆ.

ಹರಿಹರ ತಾಲ್ಲೂಕಿನ ಕೊಂಡಜ್ಜಿಯ 27 ವರ್ಷದ ವ್ಯಕ್ತಿ, ಕರ್ಲಹಳ್ಳಿಯ 33 ವರ್ಷದ ವ್ಯಕ್ತಿ, ತೆಗ್ಗಿನಕೆರೆಯ 17 ವರ್ಷದ ಯುವಕ,22 ಹಾಗೂ 36 ವರ್ಷದ ವ್ಯಕ್ತಿಗಳು, 22, 38 ಹಾಗೂ  50 ವರ್ಷದ ಮಹಿಳೆಯರು, ಬೆಳ್ಳೂಡಿಯ 40 ವರ್ಷದ ವ್ಯಕ್ತಿ ಹಾಗೂ ಹನಗವಾಡಿಯ 24 ವರ್ಷದ ವ್ಯಕ್ತಿ ಬಿಡುಗಡೆಯಾದವರಲ್ಲಿ ಸೇರಿದ್ದಾರೆ.

ಬಳ್ಳಾರಿ ಜಿಲ್ಲೆ ಹೊಸಪೇಟೆಯ 59 ವರ್ಷದ ಮಹಿಳೆ ಗುಣ ಹೊಂದಿದ್ದಾರೆ.

error: Content is protected !!