ದಾವಣಗೆರೆ, ಅ.24- ರಾಜ್ಯದಲ್ಲಿ ಕಾಲೇ ಜುಗಳನ್ನು ಪ್ರಾರಂಭಿಸುವ ಕುರಿತು ಪರಿಸ್ಥಿತಿ ಯನ್ನು ಕೂಲಂಕುಶವಾಗಿ ಅಧ್ಯಯನ ಮಾಡದೆ ಕೈಗೊಂಡಿರುವ ಸರ್ಕಾರದ ಏಕಪಕ್ಷೀಯ ನಿರ್ಧಾ ರವನ್ನು ಎಐಡಿಎಸ್‌ಓ ಉಗ್ರವಾಗಿ ಖಂಡಿಸಿದೆ.
ಹಬ್ಬಗಳ ಆಚರಣೆ ಸಂದರ್ಭಗಳಲ್ಲಿ ಕೋವಿಡ್ ಪ್ರಕರಣಗಳು ಇನ್ನೂ ಹೆಚ್ಚಾಗಬಹುದೆಂಬುದು ತಜ್ಞರ ಅಭಿಪ್ರಾಯವಾಗಿದೆ. ಸರ್ಕಾರ ಕೂಡ ಆತಂಕ ವ್ಯಕ್ತಪಡಿಸಿದೆ. ಹೀಗಿದ್ದಾಗಲೂ ಕಾಲೇಜುಗಳನ್ನು ಪ್ರಾರಂಭಿಸುವುದು ಎಷ್ಟು ಸರಿ ಎಂದು ಸಂಘಟನೆಯ ಮುಖಂಡರು ಪ್ರಶ್ನಿಸಿದ್ದಾರೆ.
ಸರ್ಕಾರ ಯಾವುದೇ ಕಾರಣಕ್ಕೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಲಾಬಿಗೆ ಬಲಿಯಾಗದೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಿತಾಸಕ್ತಿಗೆ ಬದ್ಧರಾಗಿರಬೇಕು ಎಂದು ಆಗ್ರಹಿಸಿದೆ. ಒಂದು ಕಡೆ ಶಾಲಾ ಮಕ್ಕಳಿಗೆ ಕೈಗೊಂಡಿದ್ದ `ವಿದ್ಯಾಗಮ’ ಯೋಜನೆ ಕೈಬಿಟ್ಟು ಶಾಲೆಗಳಿಗೆ ರಜೆ ಘೋಷಿಸಿದೆ. ಮತ್ತೊಂದೆಡೆ ಕಾಲೇಜುಗಳನ್ನು ಪ್ರಾರಂಭಿಸುವ ನಿರ್ಧಾರ ಕೈಗೊಂಡಿದೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಸಂಘಟನೆಯ ಜಿಲ್ಲಾಧ್ಯಕ್ಷರಾದ ಜೆ. ಸೌಮ್ಯ ಹಾಗೂ ಕಾರ್ಯದರ್ಶಿ ಎನ್. ಪೂಜಾ ಪ್ರಶ್ನಿಸಿದ್ದಾರೆ.
ಕಾಲೇಜುಗಳ ಪ್ರಾರಂಭದ ನಂತರ ಹರ ಡುವ ಕೊರೊನಾ ಕೇಸುಗಳ ಜವಾಬ್ದಾರಿಯನ್ನು ಸರ್ಕಾರ ಹೊರುವುದೇ? ಎಂದು ಪ್ರಶ್ನಿಸಿದ್ದಾರೆ.