ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮ ನ ಆದರ್ಶಗಳನ್ನು ಅಳವಡಿಸಿಕೊಳ್ಳಲು ಕರೆ

ಹರಪನಹಳ್ಳಿಯಲ್ಲಿನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನ ಕುಮಾರ್

ಹರಪನಹಳ್ಳಿ, ಅ.24- ನಾಡಿನ ಸ್ವಾತಂತ್ರ್ಯ ಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳ ಬೇಕು ಎಂದು ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್‌ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಹಾಗೂ ವಿಜಯೋತ್ಸವದ ಪ್ರಯುಕ್ತ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿದ ನಂತರ ಮಾತನಾಡಿದ ಅವರು, ಧೈರ್ಯ, ಸ್ಥೈರ್ಯವನ್ನು ಹೊಂದಿರುವ ಮಹಿಳೆಯಾಗಿ ದೇಶಕ್ಕಾಗಿ ಹೋರಾಟ ಮಾಡಿದವರಲ್ಲಿ ಚೆನ್ನಮ್ಮ ಒಬ್ಬರಾಗಿದ್ದರು ಎಂದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ನಿಯಾಮಾನುಸಾರ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ ಎಂದರು.

ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ ಮಾತನಾಡಿ, ರಾಣಿ ಚೆನ್ನಮ್ಮನವರ ಆದರ್ಶ, ತತ್ವಗಳ ಪಾಲನೆಗೆ ಮುಂದಾಗಬೇಕು. ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸಿದ್ದು, ಸಾಧನೆಯ ಹಾದಿಯಲ್ಲಿ ತ್ಯಾಗಮಯಿಯಾದ ಅವರನ್ನು ಇಂದು ಎಲ್ಲರೂ ಸ್ಮರಣೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಮುಖಂಡ ಶಶಿಧರ್‌ ಪೂಜಾರ್‌ ಮಾತನಾಡಿ, ಚೆನ್ನಮ್ಮ ಕೇವಲ ಪಂಚಮಸಾಲಿ ಸಮುದಾಯಕ್ಕೆ ಸೀಮಿತರಾದವರಲ್ಲ, ದೇಶಕ್ಕಾಗಿ ಹೋರಾಟ ಮಾಡಿದ ಮಹಿಳೆ. ಸರ್ವ ಜನಾಂಗದವರು ಸೇರಿ ಆಚರಣೆ ಮಾಡಬೇಕಾಗಿತ್ತು.   ಪಟ್ಟಣದ ಪ್ರಮುಖ ವೃತ್ತಕ್ಕೆ ಕಿತ್ತೂರು ರಾಣಿ ಚೆನ್ನಮ್ಮನವರ ನಾಮಕರಣ ಮಾಡಬೇಕು. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಬಲರಾಗಲು ಸರ್ಕಾರ ನಿಗಮ, ಮಂಡಳಿಯನ್ನು ಚೆನ್ನಮ್ಮನ ಹೆಸರಿನಲ್ಲಿ ಸ್ಥಾಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

 ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷರಾದ ಪುಷ್ಪಾ ದಿವಾಕರ್‌, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಎನ್.ಮಂಜುನಾಥ್, ಪೂಜಾರ್‌, ಮಂಜುನಾಥ್‌, ಯುವ ಘಟಕದ ಅಧ್ಯಕ್ಷ ಮಹೇಶ್ ಪೂಜಾರ್‌, ಪದಾಧಿಕಾರಿಗಳಾದ ಶ್ಯಾನಭೋಗರ ಸುರೇಶ್, ಬೇಲೂರು ಸಿದ್ದೇಶ್, ವಿರುಪಾಕ್ಷಪ್ಪ, ಚನ್ನಗೌಡ, ಅಡವಿಹಳ್ಳಿ ಮಂಜುನಾಥ್‌, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ, ಬಸವರಾಜ್‌ ಮುಲಾಲಿ, ಬಾವಿಹಳ್ಳಿ ಬಸವರಾಜ್‌, ಕರಿಬಸಪ್ಪ, ಗುರುಬಸವರಾಜ್‌, ಕೊಟ್ರೇಶ್ ಸೇರಿದಂತೆ ಇತರರಿದ್ದರು.

error: Content is protected !!