ನ್ಯಾಯಾಲಯ, ಆಯೋಗ ಸೂಚಿಸಿದರೆ ಗ್ರಾ.ಪಂ. ಚುನಾವಣೆ ನಡೆಸಲು ಸಿದ್ಧ

ಮಲೇಬೆನ್ನೂರು ಅ, 24 – ನ್ಯಾಯಾ ಲಯ ಮತ್ತು ಚುನಾವಣಾ ಆಯೋಗ ಸೂಚನೆ ನೀಡಿದರೆ ರಾಜ್ಯದಲ್ಲಿ ಗ್ರಾಪಂ ಚುನಾ ವಣೆ ನಡೆಸಲು ಸಿದ್ಧವೆಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಶನಿವಾರ ಬೆಳ್ಳೂಡಿ ಸಮೀಪದ  ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠಕ್ಕೆ  ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  ಕೊರೊನಾ ಹಾವಳಿ ರಾಜ್ಯದಲ್ಲಿ ಇನ್ನೂ ಇದೆ,  ಶಾಲಾ – ಕಾಲೇಜುಗಳನ್ನು ಯಾವಾಗ ಹೇಗೆ ಆರಂಭಿಸಬೇಕೆಂದು ಚರ್ಚೆ ನಡೆಯುತ್ತಿದೆ. ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಕೂಡ ಸದ್ಯಕ್ಕೆ ಚುನಾವಣೆ ಬೇಡ ಎನ್ನುತ್ತಿದ್ದಾರೆ. ಗ್ರಾಪಂ ಚುನಾವಣೆಯನ್ನು  ಈ ಪರಿಸ್ಥಿತಿಯಲ್ಲಿ ನಡೆಸುವುದು ಹೇಗೆ ಎಂಬ  ಪ್ರಶ್ನೆ ಸಹಜವಾಗಿದೆ. ಆದಾಗ್ಯೂ ನ್ಯಾಯಾಲಯ, ಚುನಾವಣಾ ಆಯೋಗ ಸೂಚನೆ ನೀಡಿದರೆ ನಾವು ಚುನಾವಣೆ ನಡೆಸಲು ಸಿದ್ಧವೆಂದು ಪ್ರಶ್ನೆಗೆ ಉತ್ತರಿಸಿದರು.

 ರಾಜರಾಜೇಶ್ವರಿ, ಶಿರಾ ಉಪ ಚುನಾವಣೆ ಹಾಗೂ ಎಂಎಲ್‍ಸಿ ಚುನಾವಣಾ ಫಲಿತಾಂಶವನ್ನು ರಾಜ್ಯ ಬಿಜೆಪಿ ಸರಕಾರ ದಿಕ್ಸೂಚಿಯಾಗಿ ಸ್ವೀಕರಿಸಬೇಕೆಂದು ವಿರೋಧ ಪಕ್ಷದವರು ನೀಡಿರುವ ಸವಾಲನ್ನು ನಾವು ಸ್ವೀಕರಿಸುತ್ತೇವೆ.

ಈ ಹಿಂದೆ ನಡೆದ ಹಲವು ಚುನಾವಣಾ ಸಂದರ್ಭಗಳಲ್ಲಿ ಫಲಿತಾಂಶವನ್ನು ದಿಕ್ಸೂಚಿಯಾಗಿ ಸ್ವೀಕರಿಸಬೇಕೆಂಬ ಸವಾಲು ಹಾಕಿದ್ದರು. ಆ ಚುನಾವಣೆಗಳಲ್ಲಿ ಬಿಜೆಪಿ ಪಡೆದ ಗೆಲುವು ಅವರಿಗೆ ಉತ್ತರ ನೀಡಿದೆ. ಈ ಬಾರಿಯೂ ಜನತೆ ವಿರೋಧ ಪಕ್ಷಗಳಿಗೆ ಉತ್ತರ ನೀಡಲಿದ್ದಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಬಿಹಾರ ಸರಕಾರ ಕೊರೊನಾ ಲಸಿಕೆ ಉಚಿತವಾಗಿ ವಿತರಣೆಗೆ ನಿರ್ಧರಿಸಿದೆ. ರಾಜ್ಯದಲ್ಲೂ ಇದು ಜಾರಿಯಾಗು ತ್ತದೆಯೇ ಎಂಬ ಪ್ರಶ್ನೆಗೆ ಲಸಿಕೆ ಉಚಿತವಾಗಿ ನೀಡಬೇಕೇ ಹಾಗೂ ಯಾವಾಗ ವಿತರಣೆ ಮಾಡಬೇಕೆಂಬ ಬಗ್ಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಈಶ್ವರಪ್ಪ ಹೇಳಿದರು. 

error: Content is protected !!