`ಎಸ್ಎಂಎಸ್’ ಪಾಲಿಸಿದರೆ ಕೊರೊನಾ ತಡೆಗಟ್ಟಬಹುದು

ಹೊನ್ನೂರಿನ ಕಾರ್ಯಕ್ರಮದಲ್ಲಿ ನರಸಿಂಹ ತಾಮ್ರಧ್ವಜ ಅಭಿಮತ

ದಾವಣಗೆರೆ, ಅ.22- ಕೊರೊನಾವನ್ನು ಸ್ಯಾನಿಟೈಜರ್, ಮಾಸ್ಕ್, ಸಾಮಾಜಿಕ ಅಂತರ (ಎಸ್ ಎಂಎಸ್) ಸೂತ್ರವನ್ನು ಪಾಲಿಸುವುದರ ಮೂಲಕ ತಡೆಗಟ್ಟಬಹುದು ಎಂದು ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹೊನ್ನೂರು ಗ್ರಾಮದ ಬಯಲು ರಂಗಮಂದಿರದಲ್ಲಿ ಗ್ರಾಮಾಂತರ ಪೊಲೀಸರ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ `ನನ್ನ ಮಾಸ್ಕ್ ನನ್ನ ಲಸಿಕೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊರೊನಾ ಮಹಾಮಾರಿಯಿಂದ ಮನುಕುಲ ಉಳಿಯಬೇಕಾದರೆ ಸ್ಯಾನಿಟೈಜರ್, ಮಾಸ್ಕ್, ಸಾಮಾಜಿಕ ಅಂತರ ಎಂಬ ಸೂತ್ರ ಪಾಲಿಸಬೇಕಾಗಿದೆ ಎಂದು ತಿಳಿಸಿದರು.

ಕೋವಿಡ್-19 ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಇಲಾಖಾ ವತಿಯಿಂದ `ಇ.ಆರ್.ಎಸ್.ಎಸ್ – 112′, `ಸಖಿ ಕೇಂದ್ರ’ ಹಾಗೂ `ಸೈಬರ್ ಕ್ರೈಂ’ ಬಗ್ಗೆ ಜನರಿಗೆ ತಿಳುವಳಿಕೆ ನೀಡಲಾಯಿತು.

ದಾವಣಗೆರೆ ಗ್ರಾಮಾಂತರ ಸಿಪಿಐ ಮಂಜುನಾಥ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ ಐ  ಅಶ್ವಿನ್ ಕುಮಾರ್‍ ಮತ್ತಿತರರು ಭಾಗವಹಿಸಿದ್ದರು.

error: Content is protected !!