ಗುರೂ, ಇದೇನಿದು ಕೊರೊನಾ ಜಮಾನಾ? ಮತ್ತೇ ಬೆಂಗಳೂರು ಹಾಗೂ ಕೆಲವು ಜಿಲ್ಲೆ ಲಾಕ್ ಡೌನು. ಇದು ಲಾಕ್ ಡೌನೋ ಲಾಕಪ್ಪೋ ಗೊತ್ತಾಗ್ತಾ ಇಲ್ಲ.
ಬ್ರದರ್ ಈ ತ್ರಿಶಂಕು ಸ್ಥಿತಿ ಅಂತಾರಲ್ಲಾ ಅದನ್ನು ಮೀರಿದ್ದು. ಹೊರಗಡೆ ಅಡ್ಡಾಡೋ ಹಾಗಿಲ್ಲ ಒಳಗಡೆ ಇರೋ ಹಾಗಿಲ್ಲ!
ಮನೆಯೊಳಗೆ ಇರೋದಿಕ್ಕೆ ಏನು ಪ್ರಾಬ್ಲಂ?
ಎಷ್ಟೂ ಅಂತಾ ಇರ್ತಿಯಾ! ಟೈಂ ಪಾಸ್ ಮಾಡೋದು ಬಹಳ ಕಷ್ಟ.
ಹೌದೂ, ಹೊರಗಡೆ ಇದ್ದು ಏನು ಮಾಡ್ತೀಯಾ? ಬಿಸಿನೆಸ್‌ನಲ್ಲಿ ಬಿಜಿ ಅಂತೂ ಇರೋಲ್ಲ. ಗಿರಾಕಿಗಳೇ ಇಲ್ಲ.
ಅದು ನಿಜ. ಮೊದಲಿನ ಹಾಗೆ ಹೊರಗಿನ ಲೈಫು ಇಲ್ಲ. ಆದರೆ, ಒಳಗಡೆ ಇರೋದಕ್ಕಿಂತ ಹೊರಗೆ ಇರೋದು ಬೆಟ್ಟರ್ ಅಲ್ವಾ?
ಹೊರಗಡೆಗೆ ಇರೋದರಿಂದ ಕೊರೊನಾ ಎಂಟ್ರೀ ಹೊಡೆಯೋ ಭಯ ಇಲ್ವಾ?
ನೋಡು ಬ್ರದರ್ ಇವತ್ತಲ್ಲಾ ನಾಳೆ ಅದು ಎಲ್ಲರಿಗೂ ಬಂದು ಹೋಗೇ ಹೋಗುತ್ತೆ. ಅದಕ್ಕೆ ಹೆದರುತ್ತಾ ಕುಳಿತ್ರೆ ಆಗುತ್ತಾ?
ಏನು ಬಂದರೇ ಮತ್ತೆ ವಾಪಾಸ್ ಹೋಗುತ್ತಾ? ಗ್ಯಾರಂಟಿ ಇದೆಯಾ?
ಈಗಿನ ಅಂಕಿ ಅಂಶ ನೋಡಿದರೇ, ಶೇಕಡಾ 90 ಜನರಿಗೆ ಏನೂ ಆಗೋಲ್ಲಾ. ಚಿಂತಿಸಬೇಕಾದ ವಿಷಯ ಅಂದ್ರೇ, ನಮಗೆ ಬಂದಾಗ ನಮ್ಮಿಂದಾಗಿ ವಯಸ್ಸಾದವರಿಗೆ, ಡಯಾಬಿಟಿಸ್ ಮತ್ತು ಅಸ್ತಮಾ ಮುಂತಾದ ಸಮಸ್ಯೆ ಇರುವ ಜನಕ್ಕೆ ಇನ್‌ಫೆಕ್ಷನ್ ಆದರೇ? ಅವರಿಗೆ ತೊಂದರೆ ಆಗುತ್ತೆ. ಕ್ವಾರಂಟೈನ್‌ನಲ್ಲಿ ಇದ್ದು ಅದರ ರಿಸಲ್ಟ್ ನೆಗೆಟಿವ್ ಬರೋತನಕ ಕಾಯಬೇಕು.
ಇದೊಂತರಾ ಪರೀಕ್ಷೆ ಬರೆದಾಗ, ನಾವು ಪಾಸ್ ಆಗ್ತೇವೋ? ಫೇಲ್ ಆಗ್ತೇವೋ ಒಂದು ಆತಂಕ ಇರುತ್ತಲ್ವಾ ಹಾಗೇ.
ಈ ಕೋವಿಡ್ ಟೈಮಿನಲ್ಲಿ ಸ್ಟೂಡೆಂಟ್ಸ್ ಗಳದ್ದೇ ಮಜಾ ನೋಡು. ಪರೀಕ್ಷೆಯಲ್ಲಿ ಹೆಂಗೇ ಬರದ್ರೂ ಅವರ ರಿಸಲ್ಟ್ ಪಾಸು!
ನಿಜ ನೋಡು. ಅವರ ಎಜುಕೇಷನ್ ಕೂಡ ಈಗ ಆನ್ ಲೈನ್ ನಲ್ಲಿ. ಈ ಆನ್ ಲೈನ್ ಶಿಕ್ಷಣದ ಬಗ್ಗೆ ನಿನ್ನ ಅಭಿಪ್ರಾಯ ಏನು?
ಬ್ರೋ, ಅದೊಂತರಾ ಮಜಾ. ನಾವು ಕ್ಲಾಸ್ ಕೇಳ್ತೇವೋ ಇಲ್ವೋ ಮೇಷ್ಟ್ರಿಗೆ ಗೊತ್ತೇ ಆಗೋಲ್ಲಾ! ಮೇಷ್ಟ್ರು ಪಾಠ ಮಾಡೋದು ನಮಗೆ ಕೇಳಿಸುತ್ತೋ ಇಲ್ವೋ ಅದೂ ಗ್ಯಾರಂಟಿ ಇರೋಲ್ಲ.
ಅದೆಂಗೆ ಹೇಳ್ತಿಯಾ?
ವಿಕ್ಕಿ ಅಂಕಲ್ ಮತ್ತು ಅವರ ಫ್ರೆಂಡ್, ಕೆಲವು ಸ್ಟೂಡೆಂಟ್ಸ್ ಆನ್‌ಲೈನ್ ಸ್ಟಡಿ ಮಾಡೋದನ್ನ ನೋಡ್ತಾ ಇದ್ರಂತೆ. ಮಾನಿಟರ್‌ನಲ್ಲಿ ಮೇಷ್ಟ್ರು ಪಾಠ ಮಾಡೋದು ಕಾಣ್ತಾ ಇತ್ತಂತೆ. ಆ ಸ್ಟೂಡೆಂಟ್ಸು ಇನ್ನೊಂದು ಮೊಬೈಲ್‌ನಲ್ಲಿ ಗೇಮ್ಸ್ ಆಡ್ತಾ ಕುಳಿತಿದ್ದರಂತೆ. ಹತ್ತಿರ ಹೋಗಿ ನೋಡಿದಾಗ ಆ ಮೇಷ್ಟ್ರು ಪಾಠ ಮಾಡೋದು ಕೇಳ್ತಾನೇ ಇರಲಿಲ್ವಂತೆ!
ಆಮೇಲೇ?
ಆನ್‌ಲೈನ್ ಕ್ಲಾಸ್ ತಗೋತಿದ್ದ ಬೇರೆ ಹುಡುಗರಿಗೆ ಫೋನ್ ಮಾಡಿ ವಿಚಾರಿಸಿದಾಗ ಅಲ್ಲಿಯೂ ಇದೇ ಪ್ರಾಬ್ಲಮ್ಮು! ಇನ್ನೇನು ಪಿರಿಯಡ್ ಮುಗಿಯೋದಕ್ಕೆ ಬಂದಿತ್ತು.
ಮುಂದೇ?
ನೋಡು ನೋಡುತ್ತಿದ್ದಂತೆಯೇ ಕೊನೆಯ ನಿಮಿಷದಲ್ಲಿ ಕ್ಲಾಸ್ ತಗೋತಿದ್ದ ಮೇಷ್ಟ್ರು ಪಾಠ ಮಾಡೋದನ್ನ ನಿಲ್ಲಿಸಿ ಮೊಬೈಲ್ ಕ್ಯಾಮೆರಾದ ಹತ್ತಿರ ಬಂದು ಹೇಳಿದರಂತೆ.
ಏನಂತಾ!?
ಸಾರೀ, ನಿಮಗೆಲ್ಲಾ ಒಂದು ಗಂಟೆ ಬೋರ್ ಹೊಡಸಿದ್ದೇನೆ. ಕ್ಲಾಸ್ ತಗೊಳ್ಳುವಾಗ ಮರೆತು ಕೀ ಪ್ಯಾಡ್ ನಲ್ಲಿ ಈ ಬಟನ್ ಆನ್ ಮಾಡಿದ್ದೆ!
ಯಾವ ಬಟನ್?
ಮ್ಯೂಟ್ ಬಟನ್ !!!
ಆರ್.ಟಿ. ಅರುಣ್‌ಕುಮಾರ್
[email protected]