ಹರಪನಹಳ್ಳಿ : ಜನವಸತಿ ಪ್ರದೇಶದಲ್ಲಿ ಕೋವಿಡ್ ಶುಶ್ರೂಷೆ ಮಾಡುವ ವೈದ್ಯರಿಗೆ ವಸತಿ ನೀಡದಿರಲಿ

ಹರಪನಹಳ್ಳಿ, ಜು.18- ಜನವಸತಿ ಪ್ರದೇಶದಲ್ಲಿರುವ ಯು.ಎಂ. ಹೇಮಯ್ಯ ಇವರ ಕಟ್ಟಡದಲ್ಲಿ ಕೋವಿಡ್ ಶುಶ್ರೂಷೆ ಮಾಡುವ ವೈದ್ಯರಿಗೆ ವಸತಿ ನೀಡ ಕೂಡದೆಂದು ಒತ್ತಾಯಿಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ಕುರಿತು ನಿವೃತ್ತ ಕೆ.ಇ.ಬಿ. ಹಿರಿಯ ಲೆಕ್ಕ ಪರಿಶೋಧಕ ಎ.ವೀರಣ್ಣ ಹಾಗೂ ನಿವೃತ್ತ ಉಪನ್ಯಾಸಕ ಯು.ಎಂ.ಹೇಮಯ್ಯನವರು ಮಾತನಾಡಿ, ಪಟ್ಟಣದ ಹೊಸಪೇಟೆ ರಸ್ತೆಯ ಮುಖ್ಯ ರಸ್ತೆಯ ಬಳಿ ಇರುವ ವಸತಿ ಗೃಹ ಜನನಿಬಿಡ ಸ್ಥಳವಾಗಿದ್ದು, ಈ ವಸತಿ ಗೃಹಗಳಲ್ಲಿ ಹೋಟೆಲ್‌, ಕಿರಾಣಿ ಅಂಗಡಿ ಸೇರಿದಂತೆ ಅಕ್ಕ-ಪಕ್ಕ ವಸತಿ ಮನೆಗಳಲ್ಲಿ ಚಿಕ್ಕ ಮಕ್ಕಳು, ವಯಸ್ಸಾದವರು ವಾಸಿಸುತ್ತಿದ್ದು, ಅಕ್ಕ ಪಕ್ಕದಲ್ಲಿ ಶಾಲಾ-ಕಾಲೇಜುಗಳು ಇರುವುದರಿಂದ ಯಾವಾಗಲು ಜನನಿಬಿಡವಾಗಿದ್ದು, ಇಲ್ಲಿ ಕೋವಿಡ್ ಶುಶ್ರೂಷೆ ಮಾಡುವ ವೈದ್ಯರಿಗೆ ವಸತಿ ನೀಡುವುದರಿಂದ ಕೊರೊನಾ ಹರಡುವ ಸಾಧ್ಯತೆ ಜಾಸ್ತಿ ಇರುವುದರಿಂದ ಈ ಕಟ್ಟಡದಲ್ಲಿ ಕೋವಿಡ್ ಶುಶ್ರೂಷೆ ಮಾಡುವ ವೈದ್ಯರಿಗೆ ವಸತಿ ನೀಡಬಾರದೆಂದು ಒತ್ತಾಯಿಸುತ್ತಾ ಇಲ್ಲಿನ ನಿವಾಸಿಗಳ ಮಾತನ್ನು ಕೇಳದೆ ಶುಶ್ರೂಷೆ ಮಾಡುವ ವೈದ್ಯರಿಗೆ ವಾಸಿಸಲು ಅವಕಾಶ ಮಾಡಿದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಮುಖಂಡರಾದ ಎಸ್.ಎಂ.ಸದ್ಯೋಜಾತಯ್ಯ, ಹೆಚ್.ವೆಂಕಟೇಶ್‌, ಬಿ.ಶಶಿಕುಮಾರ್, ಸುರೇಶ್‌, ದಾಮೋದರ್‌, ಹೆಚ್.ರುದ್ರಪ್ಪ ಸೇರಿದಂತೆ ಇತರರಿದ್ದರು.

error: Content is protected !!