ಹಸಿವು…

ಹಸಿವು... - Janathavaniಏನಾದ್ರೂ ಮಾಡಿ ತನ್ನೊಬ್ಬ ಮಗನನ್ನು ಚೆನ್ನಾಗಿ ಓದಿಸಿ ಡಾಕ್ಟರ್ ಅಥವಾ ಇಂಜಿನಿಯರ್ ಮಾಡಲೇ ಬೇಕೆಂದು ಹಠ ಹಿಡಿದು ನಗರದ ಒಂದು ಪ್ರತಿಷ್ಠಿತ ಶಾಲೆಗೆ ಸೇರಿಸಿದ ಎಲೆಯೂರಿನ ಸಾಹುಕಾರ ಧರ್ಮಪ್ಪ. ಕಂಡ ಕಂಡವರ ಮುಂದೆ ತನ್ನ ಮಗನ ಬಗ್ಗೆ ಕೊಚ್ಚಿ ಕೊಂಡಿದ್ದ.

ಅದೇ ಊರಿನ ಬಡ ರೈತ ರೇವಪ್ಪ ತನ್ನ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದ. ನಿಷ್ಠೆಯಿಂದ ಓದಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿ ಸಿ.ಇ.ಟಿ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸಿ ಮೆಡಿಕಲ್ ಸೀಟು ಪಡೆದ.

ಆದರೆ ಧರ್ಮಪ್ಪನ ಕನಸು ಭಗ್ನಗೊಂಡಿತ್ತು. ಕಾರಣ ಅವನ‌ ಮಗ ಸಕಲ ಸವಲತ್ತುಂಡು ದೌಲತ್ತಿನಿಂದ ಬರೆದ ಎಸ್.ಎಸ್.ಎಲ್.ಸಿ ಯಲ್ಲಿ ಜಸ್ಟ್ ಪಾಸಾಗಿ,   ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡುಮ್ಕಿ ಹೊಡೆದಿದ್ದ. ಊರಿನಲ್ಲಿ ಮರ್ಯಾದೆ ಹಾಳಾಯಿತೆಂದು ಕುಪಿತಗೊಂಡು ಮಗನಿಗೆ ಕೆಟ್ಟದಾಗಿ ಬೈದಿದ್ದಕ್ಕೆ ಆ ಹುಡುಗ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸುವ ಸಂದರ್ಭದಲ್ಲಿ ಅದೇ ಊರಿನ ನಿವೃತ್ತ ಶಿಕ್ಷಕರೊಬ್ಬರು ತಡೆದು ಮನೆಗೆ ಕರೆದುಕೊಂಡು ಬಂದು ತಂದೆ-ಮಗನಿಗೆ  ಬುದ್ಧಿವಾದ ಹೇಳಿದರು.            

ಜ್ಞಾನದ ಹಸಿವು ಇದ್ದ ವ್ಯಕ್ತಿಯು ಜೀವನದಲ್ಲಿ ಎಷ್ಟೇ ಅಡೆ-ತಡೆಗಳಿದ್ದರೂ ಮೀರಿ ಯಶಸ್ವಿಯಾಗುತ್ತಾನೆ. ರೇವಪ್ಪನ ಮಗನ ಸಾಧನೆಯೇ ಅದಕ್ಕೆ ಉದಾಹರಣೆ ಅಂದಾಗ, ಆ ಊರಿನಲ್ಲಿ ಅಧರ್ಮದ ಅನಿಷ್ಟವಾಗಿದ್ದ ಧರ್ಮಪ್ಪನ ಕಣ್ಣು ತೇವಗೊಂಡಿತು.


ಮಹಾಂತೇಶ್.ಬಿ.ನಿಟ್ಟೂರು,
ದಾವಣಗೆರೆ.
[email protected]

 

error: Content is protected !!