ನಗರದ ಅಶೋಕ ರಸ್ತೆಯ ಗುಂಡಿಗಳನ್ನು ಮುಚ್ಚಿಸಿ

ಮಾನ್ಯರೇ, 

ಮಹಾತ್ಮ ಗಾಂಧಿ ವೃತ್ತ ಮತ್ತು ಮಂಡಿಪೇಟೆಯು ನಗರದ ಹೃದಯ ಭಾಗದಂತಿವೆ. ಮಹಾತ್ಮ ಗಾಂಧಿ ವೃತ್ತ   ಪ್ರಮುಖ ವೃತ್ತ. ಮಂಡಿಪೇಟೆಯು ನಗರಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಯ ಬಹುದೊಡ್ಡ ವಾಣಿಜ್ಯ ಕೇಂದ್ರ. ಹಾಗಾಗಿ ಪ್ರತಿಯೊಬ್ಬ ನಾಗರಿಕನು ತನ್ನ ವ್ಯಾಪಾರ-ವ್ಯವಹಾರಗಳಿಗೆ ಈ ಎರಡೂ ಭಾಗಗಳಲ್ಲಿ ಸಂಚರಿಸಲೇಬೇಕು. ಈ ಸ್ಥಳಗಳನ್ನು  ಸಂಧಿಸಲು ಅಶೋಕ ರಸ್ತೆಯ ಮೂಲಕವೇ ಹಾದು ಹೋಗಬೇಕು.‌ ಈ ರಸ್ತೆಯಲ್ಲಿ  ಸಾವಿರಾರು  ಸಂಖ್ಯೆಯ ವಾಹನಗಳು ನಿತ್ಯವೂ ಸಂಚರಿಸುತ್ತವೆ.  ಆದರೆ ಮಹಾತ್ಮ ಗಾಂಧಿ ವೃತ್ತದಿಂದ ಮಂಡಿಪೇಟೆಯನ್ನು ಸಂಪರ್ಕಿಸುವ ರೈಲ್ವೆ ಹಳಿಗಳವರೆಗಿನ ಅಶೋಕ ರಸ್ತೆ ಕೇವಲ ಮುನ್ನೂರು ಮೀಟರ್ ಗಳಷ್ಟು ಅಂತರವಿದೆ. ಆದರೆ ಈ ಅಂತರದಲ್ಲಿ ಮೂವತ್ತಕ್ಕೂ ಹೆಚ್ಚು ಗುಂಡಿಗಳಿವೆ. ಗುಂಡಿಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡುವುದು  ಚಾಲಕರಿಗೆ ಸಾಧ್ಯವೇ ಇಲ್ಲ.  ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕಾಡಬೇಕು. ಹಲವು ವರ್ಷಗಳಿಂದ ಈ  ಗುಂಡಿಗಳು ಹಾಗೆಯೇ ಇವೆ. 

ಈಗಂತು ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ.‌ ಮಳೆಯ ನೀರು ಗುಂಡಿಗಳಲ್ಲಿ  ತುಂಬಿರುವುದರಿಂದ  ಸಂಚಾರ ಮಾಡುವುದಂತು  ಪ್ರಾಯಸಕರವಾದುದು. ಕೆಲವು ಗುಂಡಿಗಳು ಬಹಳ ಆಳವಿದ್ದು ದ್ವಿಚಕ್ರ ವಾಹನಗಳಲ್ಲಿ ಓಡಾಡುವುದಂತು  ತುಂಬಾ ಸವಾಲಿನದು.‌ ಸ್ಮಾರ್ಟ್ ಸಿಟಿ ಭಾಗ್ಯ ಪಡೆದಿರುವ ದಾವಣಗೆರೆ ನಗರದ ಈ ಹೃದಯ ಭಾಗವೇ ಹೀಗಿದೆ. ಆದುದರಿಂದ ಇಲ್ಲಿ ಸಂಚಾರ ಮಾಡುವ ನಾಗರಿಕರು ಸೊಂಟ ಮುರಿದುಕೊಂಡು ಆಸ್ಪತ್ರೆ ಸೇರುವ ಮುನ್ನ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.   ಸಂಬಂಧಪಟ್ಟವರು ಕೂಡಲೆ  ಇತ್ತಕಡೆ ಗಮನ ನೀಡಿ ಅನಾಹುತಗಳನ್ನು ತಪ್ಪಿಸಬೇಕೆಂದು ವಿನಂತಿಸುತ್ತೇನೆ.


– ನಾಗರಾಜ ಸಿರಿಗೆರೆ, ದಾವಣಗೆರೆ.

error: Content is protected !!