ಕೂಡ್ಲಿಗಿ, ಅ. 22- ಪಟ್ಟಣದಲ್ಲಿ ಸಾರ್ವಜನಿಕರ ಹಾಗೂ ವಾಹನ ಸವಾರರಿಗೆ ತುಂಬಾ ತೊಂದರೆ ನೀಡುತ್ತಿದ್ದ ಬಿಡಾಡಿ ದನಗಳಿಗೆ ಬ್ರೇಕ್ ಹಾಕಲು ಇಂದು ಬೆಳಿಗ್ಗೆಯಿಂದಲೇ ಕೂಡ್ಲಿಗಿ ಪೊಲೀಸರು ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿ, ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಲ್ಲಿ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಕಳುಹಿಸಲಾಯಿತು.
ಪಟ್ಟಣದ ಪ್ರಮುಖ ರಸ್ತೆಗಳ ಮಧ್ಯದಲ್ಲೇ ಬಿಡಾಡಿ ದನಗಳು ಠಿಕಾಣಿ ಹೂಡುತ್ತಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತುಂಬಾ ತೊಂದರೆಯಾಗಿ, ಅನೇಕರು ಗಾಯಾಳು ಸಹ ಆಗಿದ್ದು ಸಾರ್ವಜನಿಕರ ದೂರಿನ ಮೇರೆಗೆ ಎಚ್ಚೆತ್ತ ಕೂಡ್ಲಿಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಫಕೃದ್ದೀನ್, ಕಿರಿಯ ಆರೋಗ್ಯ ನಿರೀಕ್ಷಕಿ ಗೀತಾ ವಿಜೇತ್ ಹಾಗೂ ಪೌರ ಕಾರ್ಮಿಕರು ಸೇರಿದಂತೆ, ಕೂಡ್ಲಿಗಿ ಪಿಎಸ್ಐ ತಿಮ್ಮಣ್ಣ ಚಾಮನೂರ್ ಹಾಗೂ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಪಟ್ಟಣದ ಕೋರ್ಟ್ ಮುಂದಿನ ರಸ್ತೆ, ಕೊಟ್ಟೂರು ರಸ್ತೆ, ಮದಕರಿ ವೃತ್ತ, ಪಾದಗಟ್ಟೆ ವೃತ್ತದಲ್ಲಿ ಇರುವ ಬಿಡಾಡಿ ದನಗಳನ್ನು ಹಿಡಿದು ಸಮೀಪದ ಗೋಶಾಲೆಗೆ ಕಳುಹಿಸುವಲ್ಲಿ ಮುಂದಾಗಿದ್ದರು.