ಹರಿಹರ, ಅ.22- ರಾಜನಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು ಎಸ್ಟಿ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುವಂತೆ ಆಗ್ರಹಿಸಿ ಕೈಗೊಂಡಿದ್ದ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ, ಹರಿಹರದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ 2ನೇ ದಿನವೂ ನಡೆಯಿತು.
ರಾಜನಹಳ್ಳಿ ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ತಾ. ನಾಯಕ ಸಮಾಜದ ಅಧ್ಯಕ್ಷ ಕೆ.ಆರ್.ರಂಗಪ್ಪ, ಮುಖಂಡರಾದ ಜಿಗಳಿಯ ಜಿ.ಆನಂದಪ್ಪ, ಹೆಚ್.ಟಿ.ರಂಗನಾಥ್, ಜಿ.ಆರ್.ಹನುಮಂತಪ್ಪ, ಕೊಕ್ಕನೂರು ಸೋಮಶೇಖರ್, ಪಾಳೇಗಾರ್ ನಾಗರಾಜ್, ಹರಿಹರದ ಹಂಚಿನ ನಾಗಣ್ಣ, ಮದಕರಿ ಪಾಲಾಕ್ಷಪ್ಪ, ಮೂರ್ತಿ, ಇಂದಿರಾ ನಗರದ ರಾಜು, ಮೆಣಸಿನಹಾಳ್ ಬಸವರಾಜ್, ಗುತ್ತೂರಿನ ಕೃಷ್ಣಪ್ಪ, ಕೆ.ಬೇವಿನಹಳ್ಳಿ ಹಾಲೇಶ್ ಮತ್ತಿತರರು ಭಾಗವಹಿಸಿದ್ದರು.
ತಾ.ಪಂ. ಸದಸ್ಯ ಆದಾಪುರ ವೀರಭದ್ರಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಹಳ್ಳಿ ಪ್ರಭುಗೌಡ, ಶಿವನಹಳ್ಳಿ ವೀರೇಶ್, ಯಲವಟ್ಟಿಯ ಕೆ.ನರಸಪ್ಪ, ಡಿ.ಹೆಚ್.ಮಹೇಂದ್ರಪ್ಪ, ಎ.ಸುರೇಶ್, ರಾಮಚಂದ್ರಪ್ಪ, ಬೂದಿಹಾಳ್ ಸುರೇಶ್ ಮತ್ತಿತರರು ವಾಲ್ಮೀಕಿ – ನಾಯಕ ಸಮಾಜದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ನೀಡಿದರು.